ಅತ್ಯಾಚಾರಕ್ಕೆ ಯತ್ನ: ಗ್ರಾಪಂ ಸದಸ್ಯನ ವಿರುದ್ಧ ದೂರು
ಸಾಗರ: ಆಶಾ ಕಾರ್ಯಕರ್ತೆಯ ಅತ್ಯಾಚಾರಕ್ಕೆ ಯತ್ನಿಸಿದ ಸಂಬಂಧ ತಾಲೂಕಿನ ಹಿರೇಬಿಲಗುಂಜಿ ಗ್ರಾಪಂ ಸದಸ್ಯ ಯೋಗೀಶ್ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹುತ್ತದಿಂಬ ಗ್ರಾಮದವನಾದ ಯೋಗೀಶ್ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಆಶಾ ಕಾರ್ಯಕರ್ತೆಯ ಅತ್ಯಾಚಾರಕ್ಕೆ ಯತ್ನಿಸಿದ ಎನ್ನಲಾಗಿದೆ. ಅಷ್ಟರಲ್ಲಿ ಆಕೆಯ ಮನೆಯವರು ಬಂದಿದ್ದರಿಂದ ಓಡಿಹೋಗಿದ್ದಾನೆ. ಪ್ರಕರಣ ದಾಖಗಿದೆ.
ಲಾಡ್ಜ್ನಲ್ಲಿ ಆತ್ಮಹತ್ಯೆ
ಶಿವಮೊಗ್ಗ: ಶಿವಮೊಗ್ಗ ಬಸ್ ನಿಲ್ದಾಣ ಸಮೀಪದ ಅಶೋಕ ಲಾಡ್ಜ್ನಲ್ಲಿ ಗುರುವಾರ ವ್ಯಕ್ತಿಯೊಬ್ಬರು ನೇಣಿಗೆ ಶರಣಾಗಿದ್ದಾರೆ. ಮೃತ ವ್ಯಕ್ತಿಯನ್ನು ಸುರೇಶ್ (37) ಎಂನ್ನಲಾಗಿದ್ದು, ಸಾವಿಗೆ ಕಾರಣ ತಿಳಿದುಬಂದಿಲ್ಲ. ಬೆಂಗಳೂರಿನ ಗಾರ್ಮೆಂಟ್ಸ್ನಲ್ಲಿ ಉದ್ಯೋಗಿಯಾಗಿದ್ದು, ಕಳೆದ 3 ದಿನದಿಂದ ವಾಸವಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.