ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಇಂದಿನಿಂದ ದಿನಗೂಲಿ ನೌಕರರ ಧರಣಿ

Lingaraj Badiger
Updated On : 22 Mar 2013, 11:23 am

ಕ.ಪ್ರ. ವಾರ್ತೆ, ಶಿವಮೊಗ್ಗ, ಮಾ.21
ಸಾಗರ ಅರಣ್ಯ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ 11 ದಿನಗೂಲಿ ನೌಕರರು ತಮಗಾಗುತ್ತಿರುವ ವಂಚನೆಯನ್ನು ಸರಿಪಡಿಸುವಂತೆ ಒತ್ತಾಯಿಸಿ ಶುಕ್ರವಾರದಿಂದ ಅನಿರ್ದಿಷ್ಟ ಧರಣಿ ನಡೆಸಲು ಮುಂದಾಗಿದ್ದಾರೆ.
ದಿನಗೂಲಿ ಆಧಾರದಲ್ಲಿ ಕಳೆದ 2 ದಶಕದಿಂದ ಕಾರ್ಯನಿರ್ವಹಿಸುತ್ತಿರುವ ದಿನಗೂಲಿ ನೌಕರರಿಗೆ ಸೇವಾ ಖಾಯಮಾತಿ ಸೇರಿದಂತೆ ವಿವಿಧ ಸೌಲಭ್ಯ ಕೊಡಲು ಇಲಾಖೆಯ ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದು ಧರಣಿಗೆ ಕಾರಣವಾಗಿದೆ.
ಪ್ಲಾಂಟೇಶನ್ ಕಾಯುವುದು, ಅರಣ್ಯ ಸಂರಕ್ಷಣೆ, ಫಾರೆಸ್ಟರ್ ಸೂಚನೆಯಂತೆ ಹಗಲು ರಾತ್ರಿ ಕಾರ್ಯನಿರ್ವಹಿಸುತ್ತಿದ್ದೇವೆ, ನಮ್ಮಲ್ಲಿ 2,500ಯಿಂದ 5 ಸಾವಿರವರೆಗೆ ಸಂಬಳ ಪಡೆಯುತ್ತಿದ್ದಾರೆ. ಆದರೆ, ಸೇವಾ ಖಾಯಮಾತಿ, ಭತ್ಯೆ ಪಡೆಯಲು ನಾವು ಅರ್ಹರಿದ್ದರೂ ಅವಕಾಶ ಕೊಡುತ್ತಿಲ್ಲ ಎಂಬುದು ಈ ನೌಕರರ ಅಳಲು.
ನಮ್ಮ ಹೋರಾಟಕ್ಕೆ ರಾಜ್ಯ ದಿನಗೂಲಿ ನೌಕರರ ಮಹಾ ಮಂಡಳ ಬೆಂಬಲ ಸೂಚಿಸಿದೆ. ಸೇವೆ ಖಾಯಂ ಮಾಡಬೇಕು, ಹೆಚ್ಚುವರಿ ಸಂಬಳ ತಡೆ ಹಿಡಿಯಲಾಗಿದ್ದನ್ನು ಕೊಡಬೇಕು ಎಂಬಿತ್ಯಾದಿ ಬೇಡಿಕೆಯೊಂದಿಗೆ ಪ್ರತಿಭಟನೆ ನಡೆಸುತ್ತಿದ್ದೇವೆ. ಶಿವಮೊಗ್ಗ ನಗರಸಭೆಯಿಂದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸಿ ಮುಷ್ಕರ ನಡೆಸಲಾಗುತ್ತದೆ. ಬೇಡಿಕೆ ಈಡೇರಿಕೆ ವರೆಗೆ ಕದಲುವುದಿಲ್ಲ ಎಂದು ಸಿಬ್ಬಂದಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement