ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಚೆನ್ನಮಲ್ಲಿಕಾರ್ಜುನ ರಥೋತ್ಸವ

Mainashree
Updated On : 23 Mar 2013, 10:56 am

ಕ.ಪ್ರ.ವಾರ್ತೆ  ಶಿರಾಳಕೊಪ್ಪ  ಮಾ.22
ದ್ವಿತೀಯ ಶ್ರೀಶೈಲ ವೆಂದು ಖ್ಯಾತಿ ಪಡೆದಿರುವ ತೊಗರ್ಸಿ ಚೆನ್ನಮಲ್ಲಿಕಾರ್ಜುನ ರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಯಶಸ್ವಿಯಾಗಿ ನಡೆಯಿತು.
ಗುರುವಾರ ರಾತ್ರಿಯಿಂದಲೇ ರಥವನ್ನು ಎಳೆಯಲು ಸಕಲ ಸಿದ್ಧತೆಗಳು ನಡೆದು ಶುಕ್ರವಾರ ಬೆಳಗಿನಜಾವದಲ್ಲಿ ಪ್ರಾರಂಭವಾದ ರಥೋತ್ಸವ ಬೆಳಗ್ಗೆ 9-30ಕ್ಕೆ ನೆಲೆನಿಂತಾಗ ಗಜರಾಜ ಸ್ವಾಮಿಗೆ ಮಾಲೆಹಾಕುವದರೊಂದಿಗೆ ಮುಕ್ತಾಯವಾಯಿತು.
ರಥೋತ್ಸವದಲ್ಲಿ ಹಲವಾರು ಜನಪದ ಕಲಾತಂಡಗಳು ಭಾಗವಹಿಸಿ ವಿಶೇಷ ಮೆರಗನ್ನು ತಂದಿದ್ದವು. ಪ್ರಾರಂಭದಲ್ಲಿ ಗಜರಾಜ ನಂತರ ವಿವಿದ ಕಲಾತಂಡಗಳು ತಮ್ಮ ಪ್ರದರ್ಶನ ಪ್ರದರ್ಶಿಸಿದವು.
ಸಾವಿರಾರು ಭಕ್ತರು ತಮ್ಮ ಬೇಡಿಕೆ ಈಡೇರಿಸುವಂತೆ ಸ್ವಾಮಿಯಲ್ಲಿ ಹಲವಾರು ಸೇವೆಗಳನ್ನು ಸಲ್ಲಿಸಿದರು. ವಿಶೇಷವೆಂದರೆ ಎಲ್ಲ ಜನಾಂಗದವರು ಆರಾಧಿಸುವ ಈ ಜಾತ್ರೆ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ.
ಜಾತ್ರಾಮಹೋತ್ಸವದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಮಾಜಿ ವಿಧಾನ ಪರಿಷತ್ ಸದಸ್ಯ ಶಾಂತವೀರಪ್ಪಗೌಡ, ಎಪಿಎಂಸಿ ಅಧ್ಯಕ್ಷ ಸಣ್ಣ ಹನುಮಂತಪ್ಪ, ಹಲವಾರು ಜನಪ್ರತಿನಿಧಿಗಳು ಹಾಗು ಪ್ರಮುಖರು ಭಾಗವಹಿಸಿದ್ದರು.
ಸಿಪಿಐ ಮಾದಪ್ಪ ಹಾಗು ಎಸ್.ಐ. ಗುರುಪ್ರಸಾದ್ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಏರ್ಪಡಿಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement