ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಬಿಡಿ ಸುದ್ದಿ

Mainashree
Updated On : 23 Mar 2013, 10:58 am

ಇಂದು  ಪ್ರಾರ್ಥನೆ
ಶಿವಮೊಗ್ಗ:
ಈಸ್ಟರ್ ಹಬ್ಬದ ಸಿದ್ಧತೆ ಪ್ರಯುಕ್ತ ನಗರದ ಶರಾವತಿನಗರದ ಬಾಲಯೇಸು ದೇವಾಲಯದಲ್ಲಿ ಮಾ.23ರಂದು ಸಂಜೆ 9 ರಿಂದ ಬೆಳಿಗ್ಗೆ 5ರ ವರೆಗೆ ಅಹೋರಾತ್ರಿ ಪ್ರಾರ್ಥನೆ ಏರ್ಪಡಿಸಲಾಗಿದೆ ಎಂದು ಯುವಮಿತ್ರ ಸಂಸ್ಥೆ ನಿರ್ದೇಶಕ ಫಾ. ರೊನಾಲ್ ವೇಗಸ್ ತಿಳಿಸಿದ್ದಾರೆ. ಯುವಮಿತ್ರ, ಐಸಿವೈಎಂ, ವೈಸಿಎಸ್, ವೈಎಸ್ಎಂ ಸಂಸ್ಥೆಗಳ ಆಶ್ರಯದಲ್ಲಿ ಪ್ರಾರ್ಥನೆ ಏರ್ಪಡಿಸಲಾಗಿದ್ದು, ತಾಲೂಕುಗಳು ಹಾಗೂ ವಿವಿಧ ಜಿಲ್ಲೆಯ ಯುವಕರು ಆಗಮಿಸುತ್ತಿದ್ದಾರೆ.ಅಂದು ರಾತ್ರಿ 9ರಿಂದ 11ರವರೆಗೆ ಫಾ. ಆಲ್ವಿನ್ ಸರಾವೋ, ಫಾ. ರೊನಾಲ್ಡ್ ವೇಗಸ್ ನೇತೃತ್ವದಲ್ಲಿ ತೈಝೆ ಪ್ರಾರ್ಥನಾ ವಿಧಿ, 11 ರಿಂದ 12ರವರೆಗೆ ಫಾ. ಜೇಕಬ್ ಎಂ.ಜೆ. ನೇತೃತ್ವದಲ್ಲಿ ಶಿಲುಬೆಯ ಮೆರವಣಿಗೆ, 12.30 ರಿಂದ 2.30ರವರೆಗೆ ಧರ್ಮಕ್ಷೇತ್ರದ ವಿವಿಧ ಘಟಕಗಳಿಂದ ಜೀವಂತ ಶಿಲುಬೆ ಹಾದಿ, 3 ರಿಂದ 4ರವರೆಗೆ ಪರಮ ಪ್ರಸಾದದ ಆರಾಧನೆ, ಬೆಳಿಗ್ಗೆ 4 ರಿಂದ 5ರ ವರೆಗೆ ಫಾ. ಮಾರ್ಕ್ ಡಿಸಿಲ್ವ ನೇತೃತ್ವದಲ್ಲಿ ದಿವ್ಯಬಲಿ ಪೂಜೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಬಿಡಿ ಸುದ್ದಿ
ಸಹಾಯವಾಣಿ
ಶಿವಮೊಗ್ಗ:
ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾವಣೆ, ತಿದ್ದುಪಡಿ, ವರ್ಗಾವಣೆ ಮತ್ತು ಮತದಾರರ ಗುರುತಿನ ಚೀಟಿ ಪಡೆಯಲು ಅನುಕೂಲವಾಗುವಂತೆ ನಮೂನೆಗಳ ವಿತರಣೆ, ಭಾಗಗಳ ಮಾಹಿತಿ ಇತ್ಯಾದಿ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಗೆ ಸಕಾಲದಲ್ಲಿ ಮಾಹಿತಿ ಒದಗಿಸಲು ಶಿವಮೊಗ್ಗ ನಗರಸಭೆಯ ಚುನಾವಣಾ ವಿಭಾಗದಲ್ಲಿ ಸಹಾಯವಾಣಿ ಕೇಂದ್ರವನ್ನು ತೆರೆಯಲಾಗಿದೆ. ಮಾಹಿತಿಗಾಗಿ 08182 290599 ಸಂಪರ್ಕಿಸಬಹುದು. ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗದಿರುವ ಹಾಗೂ ಮತದಾರರ ಪಟ್ಟಿಯಿಂದ ಕೈ ಬಿಡಲಾಗಿರುವ ಮತದಾರರು ಏ.10ರೊಳಗಾಗಿ ಅರ್ಜಿ ಸಲ್ಲಿಸುವಂತೆ ಮತದಾರರ ನಗರಸಭಾ ಪೌರಾಯುಕ್ತರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement