ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮೊಯ್ಲಿ ರಾಜಿನಾಮೆಗೆ ಒತ್ತಾಯ

Mainashree
Updated On : 23 Mar 2013, 10:56 am

ಶಿವಮೊಗ್ಗ: ಕಾರ್ಪೋರೇಟ್ ಕಂಪನಿಗಳಿಂದ ತಮ್ಮ ಪುತ್ರನ ಒಡೆತನದ ಕಂಪನಿಗಳಿಗೆ ಹಣ ಪಡೆದ ಆರೋಪಕ್ಕೆ ತುತ್ತಾಗಿರುವ ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿಯವರು ಕೂಡಲೇ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಜಿಲ್ಲಾ ಬಿಜೆಪಿ ಯುವ ಮೊರ್ಚಾ ಒತ್ತಾಯಿಸಿದೆ.
ಶುಕ್ರವಾರ ಯುವ ಮೋರ್ಚಾ ಕಾರ್ಯಕರ್ತರು ನಗರದ ಗೋಪಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಮೊಯ್ಲಿ ರಾಜಿನಾಮೆಗೆ ಆಗ್ರಹಿಸಿದರಲ್ಲದೇ, ಮೊಯ್ಲಿ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ವೀರಪ್ಪ ಮೊಯ್ಲಿಯವರ ಪುತ್ರ ಹರ್ಷ ಮೊಯ್ಲಿಯವರು ತಮ್ಮ ಕಂಪನಿಗಳಿಗೆ ಹಣ ಪಡೆದ ಬಗ್ಗೆ ವೀರಪ್ಪ ಮೊಯ್ಲಿ ಅವರ ವ್ಯವಹಾರಿಕ ಇ-ಮೇಲ್ಗೆ ಸಂದೇಶ ಕಳುಹಿಸಿರುವುದು ಸ್ಪಷ್ಟವಾಗಿದೆ. ಇದೊಂದು ಉದಾಹರಣೆ ತೆಗೆದುಕೊಂಡರೆ, ಕಾರ್ಪೋರೇಟ್ ಕಂಪನಿಗಳಿಂದ ಅಕ್ರಮವಾಗಿ ಹಣ ಪಡೆದಿರುವುದು ಸಾಬೀತಾಗಿದೆ. ಆದ್ದರಿಂದ ವೀರಪ್ಪ ಮೊಯ್ಲಿ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಕಾರ್ಯಕರ್ತರು ಒತ್ತಾಯಿಸಿದರು.
ಈ ಪ್ರಕರಣದ ಕುರಿತು ಸಿಬಿಐ ತನಿಖೆ ನಡೆಸಬೇಕೆಂದು ಒತ್ತಾಯಿಸಿದರಲ್ಲದೆ, ಕ್ರಮಕೈಗೊಳ್ಳದೇ ಹೋದಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಡಿ.ಎಸ್.ಅರುಣ, ಪ್ರಮುಖರಾದ ಸುಕುಮಾರ್, ಜಾಧವ್, ಹಿರಣ್ಣಯ್ಯ, ಧ್ರುವ, ಮಧುಸೂದನ್, ಸಾಯಿ ಪ್ರಸಾದ್ ಮೊದಲಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement