ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಆರೋಗ್ಯಕರ ಜೀವನಕ್ಕೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಅಗತ್ಯ

Mainashree
Updated On : 24 Mar 2013, 10:34 am

ಕ.ಪ್ರ.ವಾರ್ತೆ, ಕೊಪ್ಪ, ಮಾ23
ಮನುಷ್ಯ ಭೂಮಿಯ ಮೇಲೆ ಕಾಲಿಟ್ಟಾಗಿನಿಂದಲೂ ಕ್ರೀಡೆ ಮತ್ತು ಸಾಂಸ್ಕೃತಿಕ  ಚಟುವಟಿಕೆಗಳ ಪರಂಪರೆ ಬೆಳೆದು ಬಂದಿರುವುದು ಪುರಾಣಗಳಲ್ಲಿ ನೋಡಬಹುದುದಾಗಿದೆ ಎಂದು ಸಹ್ಯಾದ್ರಿ ಸಂಘದ ಅಧ್ಯಕ್ಷ ನುಗ್ಗಿ ಮಂಜುನಾಥ್ ತಿಳಿಸಿದರು.
ಶನಿವಾರ ಪುರಸಭಾ ಸಭಾಂಗಣದಲ್ಲಿ ಇಲ್ಲಿನ ಕೆ.ಬಿ.ಕೆ. ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿದ್ದ ರಾಜ್ಯ ಮಟ್ಟದ ಹಾಗೂ ಗ್ರಾಮೀಣ ಮಟ್ಟದ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ಮನುಷ್ಯನ ಆರೋಗ್ಯವಾದ ಜೀವನ ಸಾಗಿಸಲು ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಪೂರಕವಾಗುತ್ತದೆ ಎಂದರು.
ಅಧ್ಯಕ್ಷತೆಯನ್ನು ಕೆ.ಬಿ.ಕೆ. ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಗಣೇಶ್ ಶೆಟ್ಟಿ ವಹಿಸಿದ್ದರು. ಉದ್ಘಾಟನೆಯನ್ನು ಮಾಜಿ ಜಿಪಂ ಸದಸ್ಯ ಟಿ.ಡಿ. ರಾಜೇಗೌಡರು ನೇರವೇರಿಸಿದರು.
ಕಿಸಾನ್ ಮತ್ತು ಖೇತ್ ಮಜ್ದೂರ್ ಕಾಂಗ್ರೆಸ್ ಅಧ್ಯಕ್ಷ ನಾರ್ವೆ ಅಶೋಕ್, ವೈದ್ಯ ನೀಲಕಂಠಪ್ಪ, ವಕೀಲರಾದ ವಿಕ್ರಮ್ ನಿಗಳೆ, ಜಾಹೀರ್ ಅಬ್ಬಸ್ ಕ್ಲಬ್‌ನ ಸದಸ್ಯ  ಮಹಮ್ಮದ್ ತಯೀಬ್, ಈವನ್ ಜೋಯಿಲ್, ಹೃಷಿಕೇಷ್ ನಾಯಕ್, ಲಕ್ಷ್ಮಣ್ ನಾಯಕ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement