ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಗಮಕ ಕಲೆ ಪ್ರೋತ್ಸಾಹಿಸಿ

Mainashree
Updated On : 24 Mar 2013, 10:33 am

ಕ.ಪ್ರ ವಾರ್ತೆಚಿಕ್ಕಮಗಳೂರುಮಾ. 23
ನಾಗರಿಕರು ಮನೆ ಮನೆಗಳಲ್ಲಿ ಗಮಕ ವಾಚನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ  ಜನ ಮಾನಸದಿಂದ ಮರೆಯಾಗುತ್ತಿರುವ ಆ ಕಲೆಯನ್ನು ಮುಂದಿನ ಪೀಳಿಗೆಗೆ ಉಳಿಸುವ ಕೆಲಸ ಮಾಡಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎನ್.ಎಸ್. ಶಿವಸ್ವಾಮಿ ಸಲಹೆ ಮಾಡಿದ್ದಾರೆ.
ಜಿಲ್ಲಾ ಗಮಕ ಕಲಾ ಪರಿಷತ್ತು ನಗರದ ಬಸವನಹಳ್ಳಿಯ ಡಿ.ವಿ. ಶಾರದಾ ಶ್ರೀನಿವಾಸ್ ಅವರ ಮನೆಯಂಗಳದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಗಮಕ ವಾಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಟಿವಿ ಹಾವಳಿ: ಗಮಕ, ಕನ್ನಡ ಸಾಹಿತ್ಯದ ಒಂದು ಅಪೂರ್ವ ಕಲೆ, ನಾಡಿನ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಗಮಕ ಮಹತ್ತರವಾದ ಪಾತ್ರ ವಹಿಸಿದೆ ಎಂದ ಅವರು, ಆಧುನೀಕರಣ ಮತ್ತು ಟಿವಿ ಹಾವಳಿಯಿಂದಾಗಿ ಈ ಕಲೆ ಜನಮಾನಸದಿಂದ ದೂರವಾಗುತ್ತಿದೆ ಎಂದು ವಿಷಾದಿಸಿದರು.
ನಾಡಿನ ಭಾಷೆ ಮತ್ತು ಸಂಸ್ಕೃತಿ ಉಳಿಯಬೇಕಾದರೆ ಗಮಕದಂತಹ ಕಲೆಗಳು ಉಳಿಯಬೇಕು ಎಂದ ಅವರು, ಈ ಹಿನ್ನೆಲೆಯಲ್ಲಿ ಮನೆ ಮನೆಗಳಲ್ಲೂ ಗಮಕ ವಾಚನ ನಡೆಯಬೇಕು. ಆ ಮೂಲಕ ಇಂದಿನ ಯುವಜನತೆಗೆ ಅದರ ಸೊಗಡನ್ನು ಪರಿಚಯಿಸುವ ಕೆಲಸವಾಗಬೇಕು ಎಂದು ಕರೆ ನೀಡಿದರು.
ಮನಸ್ಸಿಗೆ ಮುದ: ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ರಾಮಸುಬ್ರಾಯ ಶೇಟ್, ಗಮಕ ವಾಚನವನ್ನು ಅರ್ಥ ಮಾಡಿಕೊಂಡಲ್ಲಿ ಅದು ಮನಸ್ಸಿಗೆ ಮುದ ನೀಡುತ್ತದೆ ಎಂದು ಹೇಳಿದರು.
ನಶಿಸುತ್ತಿರುವ ನಾಡಿನ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹೆತ್ತವರು ಮತ್ತು ಶಿಕ್ಷಕರು ಮಕ್ಕಳಿಗೆ ಆ ಕಲೆಗಳ ಬಗ್ಗೆ  ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು.
ಗಮಕಿ ಶಶಿಕಲಾ ಶಿವಶಂಕರ್ ಗಮಕ ವಾಚನ ಮಾಡಿದರು. ಎಸ್.ಎಂ. ನಾಗರತ್ನ ಚಂದ್ರಶೇಖರ್ ವ್ಯಾಖ್ಯಾನ ಮಾಡಿದರು. ಮಂಜುನಾಥ್, ವೇಣುಗೋಪಾಲ್ ಉಪಸ್ಥಿತರಿದ್ದರು.
ಎ.ವಿ. ಅನಂತರಾಮಯ್ಯ ಕಾರ್ಯಕ್ರಮವನ್ನು ನಿರೂಪಿಸಿದರು. ಶಾರದಾ ಶ್ರೀನಿವಾಸ್ ಸ್ವಾಗತಿಸಿದರು. ವಿದ್ಯಾ ಪ್ರಕಾಶ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement