ಗೋರಖ್ ಸಿಂಗ್ ವರದಿ ಜಾರಿಗೆ ಆಗ್ರಹ
ತೀರ್ಥಹಳ್ಳಿ: ಬತ್ತಕ್ಕೆ ಬೆಂಬಲ ಬೆಲೆ ನಿಗಧಿಪಡಿಸಿ ಮೂಗಿಗೆ ತುಪ್ಪ ಸವರುವ ಕೆಲಸ ಸರ್ಕಾರ ಮಾಡುತ್ತಿದೆ. ಸರ್ಕಾರದ ಈ ಕ್ರಮ ಸರಿಯಿಲ್ಲ ಎಂದು ಗುಂಡಗದ್ದೆ ರತ್ನಾಕರ್ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅಡಿಕೆ ಬೆಳೆಗಾರರ ಸಮಸ್ಯೆಗಳ ಬಗ್ಗೆ ಮಾತನಾಡಿದ ಅವರು ಬತ್ತದ ವ್ಯಾಪಾರಿಗಳು ರೈತರ ಆರ್ಟಿಸಿ ದಾಖಲೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ದೂರಿದರು. ಬೆಳೆಗಾರರಿಗೆ ನ್ಯಾಯ ದೊರಕಿಸಿಕೊಡಲು ಸರ್ಕಾರವೇ ನೇಮಕ ಮಾಡಿದ ಗೋರಖ್ ಸಿಂಗ್ ವರದಿಯನ್ನು ಒಪ್ಪಿ, ಅನುಷ್ಠಾನ ಮಾಡದೇ ಇದುವರೆಗೂ ಬೆಳೆಗಾರರನ್ನು ಕತ್ತಲಿನಲ್ಲಿಟ್ಟಿದ್ದಾರೆ ಎಂದರು.