ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಪಂಪ್‌ಸೆಟ್ ತೆರವು: ಖಂಡನೆ

Mainashree
Updated On : 24 Mar 2013, 10:29 am

ಕ.ಪ್ರ.ವಾರ್ತೆಭದ್ರಾವತಿ ಮಾ.23
ಭದ್ರಾ ಎಡದಂಡೆ ಮತ್ತು ಬಲದಂಡೆ ಚಾನಲ್‌ಗಳ ಮೇಲೆ ಹಲವಾರು ವರ್ಷಗಳಿಂದ ಕ್ಷೇತ್ರದ ರೈತರು ತಮ್ಮ ಜಮೀನುಗಳಿಗೆ ನೀರಿನ ಸೌಲಭ್ಯಕ್ಕಾಗಿ ಅಳವಡಿಸಿಕೊಂಡಿರುವ ಪಂಪ್‌ಸೆಟ್‌ಗಳನ್ನು ನೀರಾವರಿ ಇಲಾಖೆ ತೆರವುಗೊಳಿಸಿರುವುದನ್ನು ಶಾಸಕ ಬಿ.ಕೆ. ಸಂಗಮೇಶ್ವರ ಖಂಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಭದ್ರಾವತಿ ಕ್ಷೇತ್ರದಲ್ಲಿರುವ ಭದ್ರಾ ಜಲಾಶಯ ಕ್ಷೇತ್ರದಲ್ಲಿ ನದಿಯ  ಮೂಲಕ ಮತ್ತು ಚಾನಲ್‌ಗಳ ಮೂಲಕ ಹರಿದು ಕ್ಷೇತ್ರದ ಜನತೆಯ ಮತ್ತು ರೈತರ ಸೌಲಭ್ಯಕ್ಕಿರುತ್ತದೆಂದು  ತಿಳಿಸಿದ್ದಾರೆ.
ಸಂಕಷ್ಟದಲ್ಲಿ ರೈತರು: ರೈತರು ಈ ನೀರಿನ ಸೌಲಭ್ಯದಿಂದ ಬೆಳೆಯುತ್ತಿರುವ ಕಬ್ಬು, ಬತ್ತ, ಅಡಕೆ, ತೆಂಗು, ಬಾಳೆ ಮುಂತಾದ ಬೆಳೆಗಳಿಗಾಗಿ ನದಿಗೆ ಮತ್ತು ಚಾನಲ್‌ಗೆ ಅಳವಡಿಸಿಕೊಂಡಿರುವ ಪಂಪ್‌ಸೆಟ್‌ಗಳನ್ನು ತೆರವುಗೊಳಿಸಿದರೆ ರೈತರ ಬೆಳೆಗಳು ಹಾಳಾಗಿ ರೈತರು ಇದರಿಂದ ಸಂಕಷ್ಟಗೊಳಗಾಗುತ್ತಾರೆ.
ಇದರಿಂದ ಮುಂದೆ ಆಗುವ ಅನಾಹುತಕ್ಕೆ  ನೀರಾವರಿ ಇಲಾಖೆ ಮತ್ತು ಜಿಲ್ಲಾಡಳಿತವೇ ನೇರವಾಗಿ ಹೊಣೆಗಾರರಾಗಿರುತ್ತಾರೆ. ಇಲಾಖೆಯವರು ರೈತರ ಪಂಪ್‌ಸೆಟ್‌ಗಳನ್ನು ತೆರವುಗೊಳಿಸಲು ಮುಂದಾದಲ್ಲಿ ಇದನ್ನು ವಿರೋಧಿಸಿ ರೈತರ ಮತ್ತು ಕ್ಷೇತ್ರದ ಜನತೆಯ  ಸಮ್ಮುಖದಲ್ಲಿ ಉಪವಾಸ ಸತ್ಯಾಗ್ರಹ ಮೂಲಕ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಸಂಗಮೇಶ್ವರ ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement