ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಯುಗಮಾನೋತ್ಸವಕ್ಕೆ ಚಾಲನೆ

Mainashree
Updated On : 24 Mar 2013, 10:35 am

ಕ.ಪ್ರ.ವಾರ್ತೆನರಸಿಂಹರಾಜಪುರಮಾ.23
ಬಾಳೆಹೊನ್ನೂರಿನ ಪ್ರಾಚೀನ ಧರ್ಮ ಪೀಠಗಳಲ್ಲಿ ಒಂದಾದ ಜಗದ್ಗುರು ರಂಭಾಪುರಿ ಪೀಠದಲ್ಲಿ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ವೀರಭದ್ರಸ್ವಾಮಿ ರಥೋತ್ಸವ ಸಮಾರಂಭಕ್ಕೆ ರಂಭಾಪುರಿ ಶ್ರೀಗಳು ಅಗ್ರೋದಕ ಪೂಜೆಯೊಂದಿಗೆ ಶನಿವಾರ ಚಾಲನೆ ನೀಡಿದರು.
ಮಂಗಳ ವಾದ್ಯ, ವೈಭವದೊಂದಿಗೆ ಕಲಶ ಕನ್ನಡಿ, ಕುಂಭ ಹೊತ್ತ ಮುತ್ಯೈದೆಯರು ಹಾಗೂ ವೀರಗಾಸೆ ಕುಣಿತದವರು ಉತ್ಸವದಲ್ಲಿ ಪಾಲ್ಗೊಂಡಿದ್ದರು. ಎಡೆಯೂರು ರೇಣುಕಾ ಶಿವಾಚಾರ್ಯರು, ಹೂಲಿ ಶಿವ ಮಹಂತ ಶಿವಾಚಾರ್ಯರು, ಹಲಗೂರು ರುದ್ರಮುನಿ ಶಿವಚಾರ್ಯರು, ಅಂಬಲ ದೇವರ ಹಳ್ಳಿ ಉಜ್ಜನೀಶ್ವರ ಶಿವಾಚಾರ್ಯರು, ಬೆಳ್ಳಾವಿ ರುದ್ರಮುನಿ ಶಿವಾಚಾರ್ಯರು ಪಾಲ್ಗೊಂಡಿದ್ದರು.
ಜೊತೆಗೆ ನೂರಾರು ವೈದಿಕರು ಅಗ್ರೋದಕ ಪೂಜೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement