ಲಾರಿ, ಬೈಕ್ ನಡುವೆ ಅಪಘಾತ: ಬೈಕ್ ಸವಾರ ಸಾವು
ಶಿರಾಳಕೊಪ್ಪ: ಲಾರಿ ಮತ್ತು ಮೋಟಾರ್ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಶಿರಾಳಕೊಪ್ಪದಿಂದ ಆನವಟ್ಟಿ ಕಡೆ ಹೊರಟಿದ್ದ ಶುಂಠಿತುಂಬಿದ ಲಾರಿ ಶಿರಾಳಕೊಪ್ಪ ಹತ್ತಿರದ ದೇವಿಕೊಪ್ಪ ಕೆರೆ ಏರಿಯಮೇಲೆ ಮುಂದೆ ಹೊರಟಿದ್ದ ಬೈಕ್ಗೆ ಡಿಕ್ಕಿ ಹೊಡೆದಿದ್ದರಿಂದ ಬೈಕ್ ಚಾಲಕ ಮೃತಪಟ್ಟಿದ್ದಾನೆ.
ಮೃತನನ್ನು ಬಳ್ಳಿಗಾವಿಯ ಹನೀಫ್ ಸಾಬ್ ಮಗ ಜಬೀಉಲ್ಲಾ(22) ಎಂದು ಪತ್ತೆಯಾಗಿದೆ. ಲಾರಿ ಪಕ್ಕದ ಆಳವಾದ ಗದ್ದೆಯಲ್ಲಿ ಉರಿಳಿ ಬಿದ್ದಿದೆ. ಲಾರಿ ಚಾಲಕ ಹಾಗು ಕ್ಲೀನರ್ ಪರಾರಿಯಾಗಿದ್ದಾರೆ.