ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸಮಸ್ಯೆ ಪರಿಹಾರಕ್ಕೆ ಸಭೆ

Mainashree
Updated On : 24 Mar 2013, 10:30 am

ಕ.ಪ್ರ.ವಾರ್ತೆ ಜೋಗ್‌ಫಾಲ್ಸ್  ಮಾ.23
ಸ್ಥಳೀಯವಾಗಿ ಸಾರ್ವಜನಿಕರು ಅನುಭವಿಸುತ್ತಿರುವ ತೊಂದರೆ ಪರಿಹರಿಸಿಕೊಳ್ಳಲು ನಾಗರಿಕ ಸಮಿತಿ ಸಭೆಗಳನ್ನು ಆಯೋಜಿಸಲಾಗುತ್ತಿದ್ದು, ಇದಕ್ಕೆ ಉತ್ತಮ ಜನಸ್ಪಂದನೆಯೂ ದೊರೆತಿದೆ ಎಂದು ಶಿವಮೊಗ್ಗ ಜಿಲ್ಲಾ ಎಸ್ಪಿ ಕೌಶಲೇಂದ್ರಕುಮಾರ್ ಅವರು ತಿಳಿಸಿದರು.
ಕಾರ್ಗಲ್‌ನ ಪೊಲೀಸ್ ಠಾಣೆಯಲ್ಲಿ ಬುಧವಾರ ಏರ್ಪಡಿಸಿದ್ದ ನಾಗರಿಕ ಸಮಿತಿ ಸಭೆಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದರು.
ಪರಿಹಾರಕ್ಕೆ ವೇದಿಕೆ: ಪೊಲೀಸರೊಂದಿಗೆ ನೇರ ಮತ್ತು ಮುಕ್ತವಾಗಿ ಮಾತನಾಡಲು ನಾಗರಿಕರಿಗೆ ವೇದಿಕೆಯನ್ನು ಸಭೆಗಳ ಮೂಲ ಕಲ್ಪಿಸಲಾಗಿದ್ದು, ಇದರಿಂದ ಸ್ಥಳೀಯವಾಗಿ ಸಾರ್ವಜನಿಕರು ಅನುಭವಿಸುತ್ತಿರುವ ವೈಯಕ್ತಿಕ ಮತ್ತು ಇತರೆ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಲು ವೇದಿಕೆ ಕಲ್ಪಿಸಲಾಗಿದೆ ಎಂದರು.
ಪೊಲೀಸರಿಂದ ಸಾರ್ವಜನಿಕರಿಗೆ ಆಗುವ ಉಪಯೋಗ, ತೊಂದರೆ ಬಗ್ಗೆ ಚರ್ಚಿಸಲು ಮತ್ತು ಆಡಳಿತದಲ್ಲಿ ಆಗಬೇಕಾದ ಸುಧಾರಣೆಗಳ ಬಗ್ಗೆ ವಿಸ್ತಾರವಾಗಿ ಚರ್ಚಿಸಲು ನಾಗರಿಕ ಸಮಿತಿ ಸಭೆಗಳನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಅನಿವಾರ್ಯತೆ: ಈ ಸಂದರ್ಭದಲ್ಲಿ ಸಾರ್ವಜನಿಕರು ಊರ ಹೊರಗೆ ಪೊಲೀಸ್ ಠಾಣೆ ನಿರ್ಮಿಸಿ, ಜನರಿಂದ ದೂರವಾಗುತ್ತಿರುವ ಬಗ್ಗೆ ಪ್ರಶ್ನಿಸಿದಾಗ ಪೊಲೀಸ್ ಇಲಾಖೆಗೆ ಸೇರಿದ ಜಾಗದಲ್ಲಿ ಠಾಣೆ ನಿರ್ಮಿಸುವ ಅನಿವಾರ್ಯತೆ ಇದ್ದುದಾಗಿ ತಿಳಿಸಿದರು.
ಕಾರ್ಗಲ್ ವ್ಯಾಪ್ತಿಯ ಸುಮಾರು 80 ಕಿ.ಮೀ ವರೆಗೆ ಇದ್ದು, ಇಲ್ಲಿನ ಸಿಬ್ಬಂದಿಗೆ ಸುಸಜ್ಜಿತ ವಾಹನ ವ್ಯವಸ್ಥೆ ಕಲ್ಪಿಸಬೇಕು ಸಾರ್ವಜನಿಕರು ಮನವಿ ಮಾಡಿದರು. ಅಲ್ಲದೇ ಕಾರ್ಗಲ್‌ನಲ್ಲಿ ವಾಹನ ದಟ್ಟಣೆ ಹೆಚ್ಚುತ್ತಿದ್ದು, ವಾಹನ ಸವಾರರು ಎಲ್ಲೆಂದರಲ್ಲಿ ವಾಹನ ನಿಲ್ಲಿಸುವ ಮೂಲಕ ಟ್ರಾಫಿಕ್ ಜಾಮ್ ಆಗಲು ಕಾರಣರಾಗಿದ್ದು, ಇದನ್ನು ನಿವಾರಿಸಲು ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು.
ಆಗ ಪಟ್ಟಣದ ಮಧ್ಯ ಭಾಗದಲ್ಲಿ ಪಪಂನಿಂದ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿ ವಾರದಲ್ಲಿ 3 ದಿನ ರಸ್ತೆಯ ಬಲಬದಿ ಮತ್ತು 3 ದಿನ ಎಡಬದಿಯಲ್ಲಿ ವಾಹನ ನಿಲ್ಲಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು. ಸಾಗರ ಗ್ರಾಮಾಂತರ ಠಾಣೆ ಸರ್ಕಲ್ ಇನ್ಸ್‌ಪೆಕ್ಟರ್ ಜಿ.ಸಿ. ರಾಜು, ಶ್ರೀನಿವಾಸ್.ಎಂ.ಪೈ, ಶಿವಾನಂದ ಪ್ರಭು, ಟಿ. ಸುರೇಶ್, ಪಪಂ ಸದಸ್ಯ ಆರ್. ರಾಜೇಂದ್ರ, ಎಂ. ರಾಜು, ಪಪಂ ಅಧ್ಯಕ್ಷ ಕೆ.ಸಿ. ಹರೀಶ್ ಗೌಡ, ಧನಪಾಲ್ ಗೌಡ್ರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement