ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸುದ್ದಿ ಸಂಕ್ಷೇಪ

Mainashree
Updated On : 24 Mar 2013, 10:37 am

ಆತ್ಮಹತ್ಯೆ
ನರಸಿಂಹರಾಜಪುರ:
ನಾಗಲಾಪುರ ಗ್ರಾಮದ ಮುಂಡೊಳ್ಳಿಯ ಜನತಾ ಕಾಲೋನಿಯಲ್ಲಿ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ. ಗೌರಮ್ಮ (47) ಮೃಪಟ್ಟವರು. ಇವರು ತಮ್ಮ ತೋಟದಲ್ಲಿದ್ದ ಆಲದ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಒಂದು ತಿಂಗಳಿಂದ ಗೌರಮ್ಮ ಅವರು ಕಾಯಿಲೆಯಿಂದ ನರಳುತ್ತಿದ್ದರು.
ಇಬ್ಬರು ಬೈಕ್ ಸವಾರರ ಸಾವು
ತೀರ್ಥಹಳ್ಳಿ:
  ಮಂಡಗದ್ದೆ ಸಮೀಪದ ನೆಲ್ಲಿಸರ ಕ್ಯಾಂಪ್ ಹತ್ತಿರ ಮರಳು ಲಾರಿ ಬೈಕ್ ಮೇಲೆ  ಮುಗುಚಿಬಿದ್ದು   ಬೈಕ್ ಸವಾರ  ಸಂತೋಷ್(25) ಹಾಗೂ  ಗೀತಾ(21) ಸ್ಥಳದಲ್ಲೇ ಮೃತಪಟ್ಟ ಧಾರುಣ ಘಟನೆ ನೆಡೆದಿದೆ.  ಶನಿವಾರ  ಮಧ್ಯಹ್ನ ಸುಮಾರು 1.30ರ ಹೊತ್ತಿಗೆ ಅಪಘಾತ ನೆಡೆದಿದ್ದು, ಅಪಘಾತಕ್ಕೀಡಾದವರು ಶಿವಮೊಗ್ಗದ ಹೊಸಮನೆ ಹಾಗೂ ಬಸವನಗುಡಿಗೆ ಸೇರಿದವರಾಗಿದ್ದಾರೆ.  ಕುಪ್ಪಳಿಗೆ ಭೇಟಿ ನೀಡಲು ಅವರು ಹೋಗುತ್ತಿದ್ದರು. ಮಾರ್ಗಮಧ್ಯದಲ್ಲಿ ನೆಲ್ಲಿಸರ ಸಮೀಪ ಮರಳು ಲಾರಿ  ಬೈಕಿನ ಮೇಲೆ  ಮಗಚಿಬಿದ್ದ  ಪರಿಣಾಮವಾಗಿ ಇವರಿಬ್ಬರೂ ಮೃತಪಟ್ಟದ್ದಾರೆ ಎಂದು  ಪೊಲೀಸರು ತಿಳಿಸಿದ್ದಾರೆ.    ಮಾಳೂರು ಪೊಲಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಾಳೂರು ಠಾಣೆಯ ವ್ಯಾಪ್ತಿಯ ಬಿದರಹಳ್ಳಿ ಗ್ರಾಮದ ಉಬ್ಬೂರು ರಸ್ತೆಯ ಮೋರಿಯ ಬಳಿ ಕೊಲೆಯಾದ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದ್ದು,  ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ  ರಸ್ತೆಬದಿಯಲ್ಲಿಡಲಾಗಿತ್ತು ಎನ್ನಲಾಗಿದೆ.
ಕಾಲೇಜಿನ ವಿವಿಧ ಸಂಘಗಳ ಸಮಾರೋಪ ಸಮಾರಂಭ
ಕ.ಪ್ರ.ವಾರ್ತೆಶೃಂಗೇರಿಮಾ.23

ಪಟ್ಟಣದ ಜೆಸಿಬಿಎಂ ಕಾಲೇಜಿನ ಡಾ.ಟಿ.ಎಂ.ಎ. ಪೈ ಸಭಾಂಗಣದಲ್ಲಿ ಜಗದ್ಗುರು ಚಂದ್ರಶೇಖರ ಭಾರತೀ ಮಹಾಸ್ವಾಮಿಗಳವರ ದತ್ತಿ ಉಪನ್ಯಾಸ, ಪ್ರತಿಭಾ ಪುರಸ್ಕಾರ, ಕಾಲೇಜಿನ ವಿವಿಧ ಸಂಘಗಳ ಸಮಾರೋಪ ಸಮಾರಂಭ ನಡೆಯಿತು. ಹರಿಹರಪುರ ಮಠದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಶ್ರೀ ಸಾನ್ನಿಧ್ಯ ವಹಿಸಿದ್ದರು. ಕಳೆದ ಸಾಲಿನಲ್ಲಿ ಅತಿ ಹೆಚ್ಚು ಅಂಕಗಳಿಸಿದ ಕಲಾ, ವಿಜ್ಞಾನ, ವಾಣಿಜ್ಯ ವಿಭಾಗಗಳ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.  ಕ್ರೀಡಾಪಟುಗಳಿಗೆ ಹಾಗೂ ನಿವೃತ್ತ ಗುಮಾಸ್ತೆ ಪ್ರಭಾವತಿಯವರನ್ನು ಅಭಿನಂದಿಸಲಾಯಿತು. ಪ್ರಾಚಾರ್ಯ ವೀರಪ್ಪ ಗೌಡ, ರಾಮ್ ಪ್ರಸಾದ್, ರಾಘವೇಂದ್ರ, ಕೌಶಿಕ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement