ಸ್ನೇಹಿತರ ಬಳಗದ ರಕ್ತದಾನ ಶಿಬಿರ
ಕ.ಪ್ರ.ವಾರ್ತೆತೀರ್ಥಹಳ್ಳಿ ಮಾ.23
ಕೋಣಂದೂರಿನ ಸ್ನೇಹಿತರ ಬಳಗ ರಕ್ತದಾನ ಶಿಬಿರ ಏರ್ಪಡಿಸಿ 50ಕ್ಕೂ ಹೆಚ್ಚು ರಕ್ತದಾನಿಗಳಿಂದ ರಕ್ತದಾನದಲ್ಲಿ ಮಾಡುವಂತೆ ಪ್ರೇರೇಪಿಸಿತು.
ಇತ್ತೀಚೆಗೆ ದುರಂತದಲ್ಲಿ ಮೃತಪಟ್ಟ ಕೋಣಂದೂರಿನ ದಿ. ಶ್ರೀಕಾಂತ್, ದಿ.ಆರಿಫ್, ದಿ. ಸಂಪತ್ ಇವರ ಸ್ಮರಣಾರ್ಥ ಸ್ನೇಹಿತರ ಬಳಗ ಶುಕ್ರವಾರ ಈ ಶಿಬಿರವನ್ನು ಆಯೋಜಿಸಿತ್ತು.
ಪ್ರಶಾಂತ್ ಕುಕ್ಕೆ, ಕಾರ್ತಿಕ್ ನೇತೃತ್ವದಲ್ಲಿ ಸಂಯೋಜನೆಗೊಂಡ ಶಿಬಿರಕ್ಕೆ ಆರಗ ಜ್ಞಾನೇಂದ್ರ, ಸಾಲೆಕೊಪ್ಪ ರಾಮಚಂದ್ರ, ಗ್ರಾಮಪಂಚಾಯ್ತಿ ಅಧ್ಯಕ್ಷ ಪೂರ್ಣೇಶ, ಸದಸ್ಯ ಮೋಹನ್ ಶೆಟ್ಟಿ ಭೇಟಿ ನೀಡಿ ಗೆಳೆಯರ ಸಮಾಜಮುಖಿ ಕೆಲಸವನ್ನು ಅಭಿವಂದಿಸಿದರು.
ರೋಟರಿ ಭವನದಲ್ಲಿ ನೆಡೆದ ಈ ಶಿಬಿರದಲ್ಲಿ ಕೋಣಂದೂರಿ ಶರಾವತಿ ಕಾಲೇಜಿನ ಉಪನ್ಯಾಸಕರ ವೃಂದ ಭಾಗವಹಿಸಿತ್ತು. ಶಿವಮೊಗ್ಗದ ಸಂಜೀವಿನಿ ರಕ್ತಿ ನಿಧಿ ಸಂಸ್ಥೆ ರಕ್ತ ಸಂಗ್ರಹಣೆ ಮಾಡಿತು.