ಈಸ್ಟರ್ ಹಬ್ಬಕ್ಕಾಗಿ ಸಿದ್ಧತೆ
ಶಿವಮೊಗ್ಗ: ಶಿವಮೊಗ್ಗ ಧರ್ಮಪ್ರಾಂತ್ಯದ ಯುವನಿರ್ದೇಶನಾಲಯ, ಯುವಸಂಘಟನೆ, ಯುವಮಿತ್ರ (ಐ.ಸಿವೈ.ಎಂ, ವೈ.ಸಿ.ಎಸ್)ಆಶ್ರಯದಲ್ಲಿ ಶರಾವತಿನಗರದ ಬಾಲ ಯೇಸುವಿನ ದೇವಾಲಯದಲ್ಲಿ ಈಸ್ಟರ್ ಹಬ್ಬದ ಸಿದ್ಧತೆಗಾಗಿ ಆಹೋರಾತ್ರಿ ಪ್ರಾರ್ಥನೆ ಹಾಗೂ ಜೀವಂತ ಶಿಲುಭೆ ಹಾದಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶಿವಮೊಗ್ಗ ಧರ್ಮಪ್ರಾಂತ್ಯಕ್ಕೆ ಸೇರಿದ ಭದ್ರಾವತಿ, ಕಾರೇಹಳ್ಳಿ, ಸಾಗರ, ತೀರ್ಥಹಳ್ಳಿ, ಹಿರಿಯೂರು, ಹರಿಹರ, ಚಿತ್ರದುರ್ಗ ಹಾಗೂ ದಾವಣಗೆರೆ ಧರ್ಮಕೇಂದ್ರದ ಯುವ ಜನರು ಆಗಮಿಸಿದ್ದರು. ವಿಶ್ವದ ಶಾಂತಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಫಾ. ರೊನಾಲ್,ಡ್ ವೇಗಸ್, ಪಾ. ಮಾರ್ಕ್ ಪ್ಯಾಟ್ರಿಕ್ ಡಿಸಿಲ್ವ, ಪಾ. ಆಲ್ವಿನ್ ಸೇರಾಮೊ, ಹಾಗೂ ಜೇಕಬ್ ನೇತೃತ್ವ ವಹಿಸಿದ್ದರು.