ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಜೋಷಿ ಹೇಳಿದ ಒಂಟೆ ಕಥೆ

Rashmi Kasaragodu
Updated On : 25 Mar 2013, 10:50 am

ಭಾರಿ  ಬಿಸಿಲಿನಲ್ಲಿ ಒಂಟೆಯೊಂದು ಮರಳುಗಾಡಿನಲ್ಲಿ ಹೋಗುತ್ತಿತ್ತಂತೆ. ಅದಕ್ಕೆ ಕಟ್ಟಿದ ಹಗ್ಗ ಮರಳಿನಲ್ಲಿ ಎಳೆಯುತ್ತಾ ಹೋಗುತ್ತಿತ್ತು. ಇದೇ ಸಂದರ್ಭದಲ್ಲಿ ಇಲಿಯೊಂದು ಬಿಸಿಲಿನ ಬೇಗೆಗೆ ಎಲ್ಲಿಗೆ ಹೋಗುವುದೆಂದು ಗೊತ್ತಾಗದೇ ತಡಕಾಡುತ್ತಿದ್ದಾಗ ಒಂಟೆಗೆ ಕಟ್ಟಿದ ಹಗ್ಗವನ್ನು ಕಂಡು ಅದರ ಮೇಲೆ ಏರಿತು. ಕೆಲ ಹೊತ್ತಿನಲ್ಲೇ ಆ ಇಲಿ ಒಂಟೆಯನ್ನು ಎಡಕ್ಕೆ ಹೋಗು, ಬಲಕ್ಕೆ ಹೋಗು ಎಂದು ಗದರದು ಆರಂಭಿಸಿತು. ನಾನು ನಿನ್ನ ಹಗ್ಗವನ್ನು ಹಿಡಿದಿದ್ದೇನೆ, ನಾನು ಹೇಳಿದಂತೆ ಕೇಳಬೇಕು ಎಂದು ಒಂಟೆಯನ್ನು ಬೆದರಿಸಿತು. ತಾಳ್ಮೆಕೆಟ್ಟ ಒಂಟೆ ಹಗ್ಗವನ್ನು ಕೊಡವಿದಾಗ ಇಲಿಯು ಕಾದಿದ್ದ ಮರಳಿನ ರಾಶಿಯಲ್ಲಿ ಮುಳುಗಿಹೋಯಿತು.
ಕಥೆಯ ಅಂಶವೆಂದರೆ, ಇಲ್ಲಿ ಒಂಟೆ ಬಿಜೆಪಿ. ಇಲ್ಲಿ ಇಲಿಗಳಾಗಲು ಬರುವವರು ಎಚ್ಚರವಾಗಿರಿ. ವೇದಿಕೆಯ ಮೇಲಿದ್ದವರು, ಕೆಳಗಿರುವವರು, ಪಕ್ಷ ಬಿಟ್ಟು ಹೋದವರು ಎಲ್ಲರಿಗೂ ಇದೇ ಎಚ್ಚರಿಕೆ ಎಂದು ಬಿಜೆಪಿ ನೂತನ ಅಧ್ಯಕ್ಷ ಪ್ರಹ್ಲಾದ್ ಜೋಷಿ ಖಡಕ್ ಎಚ್ಚರಿಕೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement