ನಸೀರ್ ಅಹಮ್ಮದ್ ನಿಧನಕ್ಕೆ ಸಂತಾಪ
ಕ.ಪ್ರ ವಾರ್ತೆ, ಭದ್ರಾವತಿ, ಮಾ.24
ಸಂಸ್ಥೆಯ ಗೌರವ ಕಾರ್ಯದರ್ಶಿ ಬಿ.ಎಸ್. ನಸೀರ್ ಅಹಮ್ಮದ್ ನಿಧನಕ್ಕೆ ಅಲ್ ಮಹಮೂದ್ ಬಾಲಕಿಯರ ಸಂಯುಕ್ತ ಪ.ಪೂ. ಕಾಲೇಜಿನಲ್ಲಿ ಶ್ರದ್ಧಾಂಜಲಿ ಸಭೆ ಏರ್ಪಡಿಸಲಾಗಿತ್ತು. ಶಿವಮೊಗ್ಗದ ಅಲ್ ಮಹಮೂದ್ ವಿದ್ಯಾಸಂಸ್ಥೆ ಸಹಾಯಕ ಕಾರ್ಯದರ್ಶಿ ಏಜಾಜ್ ಅಹಮದ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು, ಪ್ರೌಢಶಾಲೆ, ಪ್ರಾಥಮಿಕ ಶಾಲೆಯ ಎಲ್ಲಾ ಸಿಬ್ಬಂದಿ ಉಪಸ್ಥಿತರಿದ್ದರು. ಶಹನಾ ಬೇಗಂ ಮತ್ತು ಮುಬೀನಾ ಬಾನು ಮಾತನಾಡಿದರು. ನಸೀರ್ ಅಹಮದ್ ವಿಐಎಸ್,ಎಲ್ ಕಾರ್ಖಾನೆಯಲ್ಲಿ ಅಧಿಕಾರಿಗಳಾಗಿ ದಕ್ಷತೆ ಮತ್ತು ಪ್ರಾಮಾಣಿಕತೆಗೆ ಹೆಸರುವಾಸಿಯಾಗಿದ್ದರು. ಇವರ ಅಧಿಕಾರಾವಧಿಯಲ್ಲಿ ವಿಐಎಸ್,ಎಲ್ ಕ್ರೀಡಾಂಗಣದ ಅಭಿವೃದ್ಧಿಗೆ ಶ್ರೀಯುತರು ಸಾಕಷ್ಟು ಶ್ರಮವಹಿಸಿದ್ದರು. ಶ್ರದ್ಧಾಂಜಲಿ ಸಭೆಯಲ್ಲಿ ಅಬ್ದುಲ್ ಹಮೀದ್, ಅಬ್ದುಲ್ ಅಹದ್, ಪಿ. ರಹಮಾನ್ ಮೊದಲಾದವರು ಹಾಜರಿದ್ದರು.