ಬಾಲಕನ ಮೇಲೆ ಹಂದಿ ದಾಳಿ: ಗಾಯ
ಕ.ಪ್ರ. ವಾರ್ತೆ , ಶಿರಾಳಕೊಪ್ಪ , ಮಾ.24
ಹಂದಿಯೊಂದು ಬಾಲಕನ ಮೇಲೆ ಏಕಾಏಕಿ ದಾಳಿ ಮಾಡಿ ತೀವ್ರ ಗಾಯ ಗೊಳಿಸಿದ ಘಟನೆ ಶಿರಾಳಕೊಪ್ಪ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ದೊಡ್ಡಬ್ಯಾಣದ ಕೇರಿಯ ಕನ್ಸರ್,ವೆನ್ಸಿ ರಸ್ತೆಯಲ್ಲಿ ವಾಸವಾಗಿರುವ ತಂದೆ ತಾಯಿ ಇಬ್ಬರೂ ಇಲ್ಲದ 10 ವರ್ಷದ ಸರ್ಕಾರಿ ಶಾಲೆಯಲ್ಲಿ 5ನೇ ತರಗತಿ ಓದುತ್ತಿರುವ ಅನಾಥ ಅಭಿಷೇಕ ಹಂದಿಯ ದಾಳಿಗೆ ತುತ್ತಾಗಿರುವ ಬಾಲಕನಾಗಿದ್ದಾನೆ. ತೀವ್ರವಾಗಿ ಗಾಯಗೊಂಡ ಬಾಲಕನಿಗೆ ಪಟ್ಟಣದ ವೈದ್ಯರಿಲ್ಲದ ಸಮುದಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದಾರೆ. ಬಾಲಕ ಚೇತರಿಸಿಕೊಳ್ಳುತ್ತಿದ್ದು, ಆದರೆ, ಸೋಮವಾರ ಪರೀಕ್ಷೆ ಇದ್ದು, ಇದು ಸಮಸ್ಯೆಯಾಗಿ ಪರಿಣಮಿಸಿದೆ.