ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಬಿಎಸ್,ವೈಗೆ ರೋಮ್ ರಾಜ್ಯದ ಆಸ್ತೆ

Rashmi Kasaragodu
Updated On : 25 Mar 2013, 10:49 am

ಕ.ಪ್ರ.ವಾರ್ತೆ, ಶಿವಮೊಗ್ಗ , ಮಾ.24
ಶಿಕಾರಿಪುರದಲ್ಲಿ ಬಿಎಸ್,ವೈಗೆ ಸೋಲು ನಿಶ್ಚಿತ ಎಂದು ಗುಡುಗಿದ ಅನಂತ ಕುಮಾರ್, ಬಿಜೆಪಿಯನ್ನು ಕಟ್ಟಿಹಾಕುವ ವಿಚಾರದಲ್ಲಿ ಬಿ.ಎಸ್.ಯಡಿಯೂರಪ್ಪ ಸೋನಿಯಾ ಗಾಂಧಿಯವರ ನೀಲಿಗಣ,ಿನ ಹುಡುಗ. ಅವರು ಸಿಬಿಐಗೆ ಹೆದರಿ ಕಾಂಗ್ರೆಸ್ ಜತೆ ಕೈ ಜೋಡಿಸಿದ್ದಾರೆ. ರಾಮ ರಾಜ್ಯದ ಬಗ್ಗೆ ಆಸಕ್ತಿಯಿಲ್ಲದ ಅವರಿಗೆ ರೋಂ ರಾಜ್ಯದ ಬಗ್ಗೆ ಆಸ್ತೆ ಉಂಟಾಗಿದೆ ಎಂದು ಟೀಕಿಸಿದ್ದಾರೆ.
ಭಾನುವಾರ ಬಿಜೆಪಿ ಹಮ್ಮಿಕೊಂಡ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್,ನ ಬಿ ಟೀಮ್, ಸಿ ಟೀಮ್,ನಲ್ಲಿ ಕೆಲಸ ಮಾಡಿದರೆ ಜನರು ಅರ್ಥ ಮಾಡಿಕೊಳ್ಳುತ್ತಾರೆ. ಅದೇ ರೀತಿ ಕೆಜೆಪಿ ಕಟ್ಟಿ ಬೀಳುವ ಗೋಪುರದ ಕೆಳಗೆ (ಕಾಂಗ್ರೆಸ್) ಏಕೆ ಕೂರುತ್ತೀರಿ ಎಂದೂ ಕಟಕಿಯಾಡಿದರು.
ಹಡಗನ್ನು ನೀರಿಗೆ ಬಿಡಿ: ಆಯನೂರು
ಬಿಜೆಪಿ ಮುಳುಗುವ ಹಡಗು ಎಂದು ಯಡಿಯೂರಪ್ಪ ಹೇಳಿದ್ದಾರೆ. ಆದರೆ, ಯಡಿಯೂರಪ್ಪನವರ ಹಡಗು ಇನ್ನೂ ನೀರಿಗೆ
ಇಳಿದಿಲ್ಲ. ಅದು ಮೊದಲು ನೀರಿಗೆ ಇಳಿಯಲಿ, ಅದು ದಡದಲ್ಲೇ ಉಳಿಯುತ್ತದೋ, ತೇಲುತ್ತದೋ ನೋಡೋಣ ಎಂದು ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಅವರು ಟೀಕಿಸಿದರು.
ಯಡಿಯೂರಪ್ಪ ನಾನು ಪ್ರೀತಿಸಿದ ನಾಯಕ. ಅವರಿಗೆ ಈವರೆಗೆ ಉತ್ತರಕೊಟ್ಟಿಲ್ಲ. ಆದರೆ ಅವರು ಎಸೆದಿರುವ ಸವಾಲುಗಳಿಗೆ ಅನಿವಾರ್ಯವಾಗಿ ಉತ್ತರ ಕೊಡಬೇಕಾಗಿ ಬಂದಿದೆ. ಇಷ್ಟು ದಿನ ನಮ್ಮೊಟ್ಟಿಗಿದ್ದು, ಈಗ ಸೋನಿಯಾಗಾಂಧಿಗೆ ಹೇಗೆ ನೆಂಟರಾಗಿಬಿಟ್ಟಿರಿ.
ರಾಹುಲ್ ಗಾಂಧಿಯವರು ತಮ್ಮ ಪುತ್ರ ರಾಘವೇಂದ್ರರ ಕ್ಲಾಸ್ ಮೇಟ್ ರೀತಿ ಕಂಡಿರಾ ಎಂದು ಲೇವಡಿ ಮಾಡಿದ ಅವರು, ಕುರುಕ್ಷೇತ್ರ ಸಿದ್ಧವಾಗಿದೆ, ದ್ರೋಣನ ವಿರುದ್ಧ ಪಾಂಡವರಿಗೆ ಹೋರಾಟ ಮಾಡುವುದು ಅನಿವಾರ್ಯವಾಗಿತ್ತು. ಅದೇ ರೀತಿ ನಮ್ಮದೂ ಹೋರಾಟ ಖಚಿತ ಎಂದರು.
ಬೃಹನ್ನಳೆ ಪಾತ್ರ: ಧನಂಜಯ ಕುಮಾರರದ್ದು ಬೃಹನ್ನಳೆ ಪಾತ್ರ ಎಂದು ಜರಿದ ಅವರು, ಜಾತ್ರೆಯಲ್ಲಿ ಹಿರಿಯರು ತಮ್ಮ ಮಕ್ಕಳನ್ನು ಹೆಗಲ ಮೇಲೆ ಕೂರಿಸಿ ಅಡ್ಡಾಡುವಂತೆ ಕಳೆದ ಬಾರಿ ಚುನಾವಣೆಯಲ್ಲಿ ಇಡೀ ಕ್ಷೇತ್ರದ ತುಂಬೆಲ್ಲಾ ಓಡಾಡಿಬಂದೆವು. ನಂತರ ಆ ಮಗುವಿಗೆ ನಾನೇ ಎತ್ತರ ಎನ್ನಿಸಿರಬೇಕು, ಅದು ಎತ್ತಿಕೊಂಡು ಓಡಾಡಿಸಿದವರನ್ನೇ ಒದ್ದಿತು ಎಂದು ಟೀಕಿಸಿದರು.
ಪಕ್ಷಕ್ಕೆ ಸೇರ್ಪಡೆ:  ಸಾಗರದ ಮುಖಂಡ ಅರುಣ್ ಪ್ರಸಾದ್ ಸೇರಿದಂತೆ ಆ ಭಾಗದ ಅನೇಕ ಮುಖಂಡರು ಭಾನುವಾರ ಬಿಜೆಪಿ ಸೇರ್ಪಡೆಯಾದರು.
ಶೇಖ್ ಅಹ್ಮದ್ ಯಡೇಹಳ್ಳಿ, ಹಾಜಿ ಅಬ್ದುಲ್ ವಾಜೀದ್, ಅಣ,ಪ್ಪ ಕಾರ್ಗಲ್, ಮಲ್ಲಿಕಾರ್ಜುನ ಹರತಾಳು ಸೇರಿದಂತೆ ಹಲವರನ್ನು ಪಕ್ಷದ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement