ಭದ್ರಾ ನಾಲೆ ಪಂಪ್,ಸೆಟ್ ತೆರವಿಗೆ ವಿರೋಧ
ಭದ್ರಾವತಿ: ಭದ್ರಾ ನಾಲೆಗಳಿಗೆ ಅಳವಡಿಸಿರುವ ಪಂಪ್,ಸೆಟ್,ಗಳನ್ನು ತೆರವುಗೊಳಿಸುವ ತೀರ್ಮಾನವನ್ನು ಕಾರ್ಯರೂಪಕ್ಕೆ ತಂದರೆ ಸಾವಿರಾರು ರೈತರ, ಕೂಲಿ ಕಾರ್ಮಿಕರ ವಿರೋಧವನ್ನು ಸರ್ಕಾರ ಎದುರಿಸಬೇಕಾಗುತ್ತದೆಂದು ಭದ್ರಾ ಎಡದಂಡೆ ನಾಲಾ ನೀರಾವರಿ ಪಂಪ್,ಸೆಟ್ ಬಳಕೆದಾರರ ಸಂಘ ಎಚ್ಚರಿಕೆ ನೀಡಿದೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಸಂಘದ ಆಧ್ಯಕ್ಷ ಕಲ್ಲಳ್ಳಿ ಶೇಖರ್ ಈ ಹಿಂದೆಯೂ ಶಿವಮೊಗ್ಗ ಜಿಲ್ಲಾಧಿಕಾರಿಗಳು ಸೇರಿದಂತೆ ನಾಲ್ಕು ಜಿಲ್ಲೆಯ ಜಿಲ್ಲಾಧಿಕಾರಿಗಳು, ನೀರಾವರಿ ಇಲಾಖೆ ಅಧಿಕಾರಿಗಳು, ರಕ್ಷಣಾ ಇಲಾಖೆ ಅಧಿಕಾರಿಗಳು ಮತ್ತು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ತೀರ್ಮಾನ ಕೈಗೊಂಡಿದ್ದಾಗ ರೈತರು ಉಗ್ರವಾಗಿ ಪ್ರತಿಭಟನೆ ನಡೆಸುವ ಮೂಲಕ ಅಂತಹ ತೀರ್ಮಾನವನ್ನು ಕೈಬಿಡಲಾಗಿತ್ತು.
ರೈತ ವಿರೋಧಿ: ಪಂಪ್,ಸೆಟ್ ಅಳವಡಿಸಿಕೊಂಡಿರುವ ರೈತರು ಹತ್ತಾರು ವರ್ಷಗಳಿಂದ ಇದನ್ನು ಅವಲಂಬಿಸಿದ್ದು ಇದರಿಂದ ಜೀವನವನ್ನು ಸಾಗಿಸುತ್ತಿದ್ದಾರೆ. ಸರ್ಕಾರ ಈ ಪಂಪ್,ಸೆಟ್ ತೆರವು ಕಾರ್ಯಕ್ರಮ ಕೈಗೊಂಡಲ್ಲಿ ಸಾವಿರಾರು ರೈತ ಕುಟುಂಬಗಳು ಬೀದಿ ಪಾಲಾಗುತ್ತವೆ. ಆದ್ದರಿಂದ ಈ ಕಾರ್ಯಾಚರಣೆಯನ್ನು ಸರ್ಕಾರ ಹಿಂಪಡೆದು ಯಾವುದೇ ರೀತಿಯ ರೈತವಿರೋಧಿ ಕಾರ್ಯಕ್ರಮಕ್ಕೆ ಮುಂದಾಗದೆ ಇದನ್ನು ಕೈಬಿಡಬೇಕೆಂದು ಒತ್ತಾಯಿಸಿದ್ದಾರೆ. ಒಂದುವೇಳೆ ಪಂಪ್,ಸೆಟ್ ತೆರವು ಕಾರ್ಯಾಚರಣೆ ಮುಂದುವರೆಸಿದಲ್ಲಿ ರೈತರಿಂದ ಭಾರಿ ಹೋರಾಟವನ್ನು ಸರ್ಕಾರ ಎದುರಿಸಬೇಕಾಗುತ್ತದೆಂದು ಎಚ್ಚರಿಕೆ ನೀಡಿದ್ದಾರೆ.
ಮೊಬೈಲ್ ಟವರ್ ನಿರ್ಮಾಣಕ್ಕೆ ವಿರೋಧ
ಕೊಪ್ಪ: ಪಟ್ಟಣದ ಇಂದಿರಾನಗರ ಬಡಾವಣೆಯಲ್ಲಿ ಮೊಬೈಲ್ ಟವರ್ ನಿರ್ಮಿಸಲು ಸಿದ್ಧತೆ ನಡೆಸುತ್ತಿರುವುದನ್ನು ತಕ್ಷಣದಲ್ಲಿ ತಡೆಯುವಂತೆ ಬಡಾವಣೆಯ ನಿವಾಸಿಗಳು ತಹಸೀಲ್ದಾರ್ ಲಿಂಗಪ್ಪ ಗೌಡರಿಗೆ ಮನವಿ ನೀಡಿದರು. ಈಗಾಗಲೇ ಇಂದಿರಾನಗರದ ಬಡವಾಣೆಯಲ್ಲಿ ಮೊಬೈಲ್ ಟವರ್ ನಿರ್ಮಾಣವಾಗಿದ್ದು, ಈ ಟವರ್,ನಿಂದ ಪ್ರಸಾರವಾಗುವ ಕಿರಣಗಳಿಂದ ಆರೋಗ್ಯಕ್ಕೆ ಹಾನಿಯಾಗುತ್ತಿರುವುದಲ್ಲದೇ, ಇದರ ಪಕ್ಕದಲ್ಲಿ ವಾಸ ಮಾಡುತ್ತಿರುವವರಿಗೆ ಟವರ್,ಗೆ ಬಳಸುವ ಜನರೇಟರ್ ಶಬ್ದದಿಂದ ತೊಂದರೆಯಾಗುತ್ತಿದೆ ಎಂದರು. ಇತ್ತೀಚೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಟವರ್ ನಿರ್ಮಾಣದ ಬಗ್ಗೆ ಕಠಿಣ ನಿಲುವು ತೆಗೆದುಕೊಂಡಿದ್ದು, ಈ ನಿಯಮಾವಳಿಯಂತೆ ಜನನಿಬಿಡ ಪ್ರದೇಶದಲ್ಲಿ ಹೆಚ್ಚು ಟವರ್ ನಿರ್ಮಿಸಲು ಅವಕಾಶ ಇರುವುದಿಲ್ಲವೆಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಹಾಲಿ ಇರುವ ಟವರ್ ತೆಗೆದು ಹಾಕುವುದಕ್ಕೆ ಶಿಫಾರಸ್ಸು ಮಾಡುಬೇಕು ಹಾಗೂ ಹೊಸ ಟವರ್ ನಿರ್ಮಿಸದಂತೆ ಸಂಬಂಧಿಸಿದರವರಿಗೆ ತಕ್ಷಣ ನಿರ್ದೇಶನ ನೀಡುವಂತೆ ಒತ್ತಾಯಿಸಿದರು.