'ಮೀನುಂಬಳ' ಕೃತಿ ಬಿಡುಗಡೆ
ಕ.ಪ್ರ.ವಾರ್ತೆ, ಸಾಗರ , ಮಾ.24
ಇಲ್ಲಿನ ಶಂಕರಮಠದಲ್ಲಿ ಗೀತಾಂಜಲಿ ಪುಸ್ತಕ ಪ್ರಕಾಶನ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ. ಕೆ.ಆರ್.ಕೃಷ,ಯ್ಯ ಅವರ ಮೀನುಂಬಳ ಕೃತಿಯನ್ನು ಬಿಡುಗಡೆ ಮಾಡಲಾಯಿತು.
ಕೃತಿ ಬಿಡುಗಡೆ ಮಾಡಿದ ಸತ್ಯದರ್ಶನ ಖ್ಯಾತಿಯ ಡಾ. ಪಾವಗಡ ಪ್ರಕಾಶ್, ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಪ್ರೊ. ಕೃಷ,ಯ್ಯ ನಿವೃತ್ತಿ ನಂತರ ಸಾಹಿತ್ಯ ಕೃಷಿ, ಗಮಕದಂತಹ ಚಟುವಟಿಕೆಯಲ್ಲಿ ತೊಡಗಿಕೊಂಡಿರುವುದು ಗಮನಾರ್ಹ. ನಮ್ಮಲ್ಲಿರುವ ಜ್ಞಾನ ಇಂಗಿ ಹೋಗಬಾರದು. ಶಿಕ್ಷಕ ವೃತ್ತಿ ನಿರ್ವಹಿಸಿ ನಿವೃತ್ತರಾದ ತಕ್ಷಣ ಸುಮ್ಮನೆ ಕುಳಿತುಕೊಂಡರೆ ನಮ್ಮ ಜ್ಞಾನ ಇತರರಿಗೆ ಪ್ರಯೋಜನಕ್ಕೆ ಬರುವುದಿಲ್ಲ. ಸಾಹಿತ್ಯಕೃತಿಗಳನ್ನು ರಚಿಸುವ ಮೂಲಕ ಜ್ಞಾನವನ್ನು ವಿಸ್ತರಿಸಿಕೊಳ್ಳಲು ಅವಕಾಶವಾಗುತ್ತದೆ ಎಂದರು.
ಕೃತಿಯಲ್ಲಿ ಒಟ್ಟು 11 ಅಧ್ಯಾಯವಿದ್ದು, ಪುರಾಣ, ವ್ಯಕ್ತಿವಿಶೇಷ, ಮಹಾಭಾರತ, ಕೊಡವ ಸಾಹಿತ್ಯ, ಕನ್ನಡದ ದುರಂತ ನಾಟಕಗಳ ವಿಮರ್ಶೆಗಳು ಗಮನ ಸೆಳೆಯುತ್ತವೆ. ಅದರಲ್ಲಿಯೂ ಕುಮಾರವ್ಯಾಸ, ಪಂಪಭಾರತ, ಮೂಲ ಮಹಾಭಾರತವನ್ನು ಇರಿಸಿಕೊಂಡು ಪಾಂಡುವಿನ ದುರಂತದ ಬಗ್ಗೆ ಚಿತ್ರಣ ನೀಡಿರುವುದು ಉಲ್ಲೇಖನೀಯ ಎಂದು ಹೇಳಿದರು.
ಕಣತಿಕಾರ ಪ್ರೊ.ಕೆ.ಆರ್. ಕೃಷ,ಯ್ಯ, ನನ್ನ ಪ್ರಥಮ ಕೃತಿ ಹಚ್ಚಂಬಲಿಗೆ ಸಿಕ್ಕ ಪ್ರೋತ್ಸಾಹ ಈ ಕೃತಿ ರಚಿಸಲು ಪ್ರೇರಣೆ ನೀಡಿದೆ. ಸದ್ಯದಲ್ಲಿಯೆ 70ಕ್ಕೂ ಹೆಚ್ಚು ಕಾವ್ಯಗಳ ಕುರಿತು ಗಮಕ ವ್ಯಾಖ್ಯಾನ ನೀಡಿರುವುದನ್ನು ಕೃತಿಯಾಗಿ ಹೊರ ತರುವ ಯೋಚನೆ ಹೊಂದಿದ್ದೇನೆ ಎಂದರು. ಶೃಂಗೇರಿ ಶಂಕರಮಠದ ಎಸ್.ಆರ್. ತಿಮ್ಮಪ್ಪ, ಈಳಿ ನಾರಾಯಣಪ್ಪ, ಅಶ್ವಿನಿಕುಮಾರ್. ವೈ.ಎ. ದಂತಿ ಹಾಜರಿದ್ದರು.