ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಶೇ.3ರ ಬಡ್ಡಿದರದಲ್ಲಿ ಹೊಸ ಸಾಲ

Rashmi Kasaragodu
Updated On : 25 Mar 2013, 10:42 am

ಕ.ಪ್ರ.ವಾರ್ತೆ, ಭದ್ರಾವತಿ, ಮಾ.24
ಮಾ.31, 2004ರ ಹಿಂದೆ ರೈತರು ಪಡೆದ ಸಾಲ ಯಾವುದೇ ಬಡ್ಡಿ ರಿಯಾಯಿತಿ ಯೋಜನೆಗಳಿಗೆ ಒಳಪಡದೇ  ಇರುವ ಕಾರಣ ಇಂತಹ ಸುಸ್ತಿ ಸಾಲಗಾರರ ಖಾತೆಯಲ್ಲಿರುವ ಫೆ.28, 2011ರ ವರೆಗಿನ ಮುಂದುವರೆದ ಬಡ್ಡಿಯನ್ನು ಪ್ರಾಥಮಿಕ ಹಾಗೂ ರಾಜ್ಯ ಬ್ಯಾಂಕುಗಳು ಸೇರಿ ಸಮಾನಾಂತರವಾಗಿ ಭರಿಸಿಕೊಂಡು ರಿಯಾಯಿತಿಯನ್ನು ನೀಡಲು ಉದ್ದೇಶಿಸಿರುತ್ತವೆ ಎಂದು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಪ್ರಕಟಿಸಿದೆ.
 ಈ ಅಂತಿಮ ಅವಕಾಶವನ್ನು ಮಾ.30, 2013ರ ವರೆಗೆ ವಿಸ್ತರಿಸಲಾಗಿದ್ದು ಸುಸ್ತಿ ಸಾಲಗಾರರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಋಣಮುಕ್ತರಾಗಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಯೋಜನೆಯಲ್ಲಿ ಸಾಲ ತೀರುವಳಿ ಮಾಡಿದ ರೈತರಿಗೆ ಅರ್ಹತೆ ಮಿತಿಗೊಳಪಟ್ಟು ಶೇ.3ರ ಬಡ್ಡಿ ದರದಲ್ಲಿ ಕೂಡಲೇ ಹೊಸ ಸಾಲ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement