ಸಪ್ರ.ಕಾಲೇಜಿನಲ್ಲಿ ಸ್ನಾತಕೋತ್ತರ ವಿಭಾಗ ಉದ್ಘಾಟನೆ
ಕ.ಪ್ರ ವಾರ್ತೆ , ಕಡೂರು , ಮಾ.24
ಭಾರತೀಯ ಸಮಾಜದ ಜನರು ಅನುಕರಣೀಯ ಸ್ವಭಾವದವರು. ಹಳೆಯ ಮತ್ತು ಹೊಸದರ ನಡುವೆ ಜಂಜಾಟದಲ್ಲಿ ಮುಳುಗಿ ತನ್ನತನ ಕಳೆದುಕೊಳ್ಳುತ್ತಿದ್ದಾರೆ ಎಂದು ಕುವೆಂಪು ವಿಶ್ವ ವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಎಸ್. ಚಂದ್ರಶೇಖರ್ ವಿಷಾದ ವ್ಯಕ್ತಪಡಿಸಿದರು.
ಅವರು ಕಡೂರು ಸಪ್ರದ ಕಾಲೇಜಿನಲ್ಲಿ ನಡೆದ ಸಮಾಜ ಶಾಸ್ತ್ರ ಸ್ನಾತಕ್ಕೋತ್ತರ ವಿಭಾಗವನ್ನು ಉದ್ಘಾಟಿಸಿ ಜಾಗತೀಕರಣದಲ್ಲಿ ಭಾರತೀಯ ಸಮಾಜ ವಿಷಯ ಕುರಿತು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಪ್ರೊ. ಜಿ.ಎಂ. ಕೊಟ್ರೇಶಪ್ಪ ಮಾತನಾಡಿ, ಸಂಸ್ಕೃತಿ ಮತ್ತು ಜಾಗತೀಕರಣಗಳ ನಡುವಿನ ಸಂಬಂಧದಲ್ಲಿ ನಮ್ಮ ಅನುಕರಣೆಗಳ ಪ್ರಭಾವ ಯಾವ ರೀತಿಯಾಗಿರಬೇಕು ಎಂಬುದನ್ನು ತಿಳಿಸಿದರು.
ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಎನ್. ವೆಂಕಟನರಸಯ್ಯ ಮಹಿಳಾ ಸಬಲೀಕರಣಕ್ಕಾಗಿ ಪ್ರತಿಜ್ಞಾ ವಿಧಿ ಬೋಧಿಸಿ ಸ್ವಾಗತಿಸಿದರು. ಕಾಲೇಜಿನ ಎಲ್ಲಾ ವಿಭಾಗದ ಪ್ರಾಧ್ಯಾಪಕರು ಭಾಗವಹಿಸಿದ್ದರು. ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಅತಿಥಿ ಉಪನ್ಯಾಸಕ ಎಸ್. ಪ್ರಸನ್ನ ವ್ಯಕ್ತಿ ಪರಿಚಯ ಮಾಡಿಕೊಟ್ಟರು.