ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸಮಾಜಕ್ಕೆ ಆರ್ಥಿಕ ಸಬಲತೆ ಅಗತ್ಯ: ಸಂಸದ ರಾಘವೇಂದ್ರ

Rashmi Kasaragodu
Updated On : 25 Mar 2013, 10:42 am

ಕ.ಪ್ರ.ವಾರ್ತೆ, ಶಿವಮೊಗ್ಗ, ಮಾ. 24
ನೇಗಿಲ ಧರ್ಮವನ್ನು ಇಂದಿಗೂ ನಂಬಿರುವ ಕುಂಚಿಟಿಗ ಜನಾಂಗ ಇಂದಿಗೂ ನಂಬಿಕೆ, ವಿಶ್ವಾಸಕ್ಕೆ ಅರ್ಹವಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಶಿವಮೊಗ್ಗ - ಭದ್ರಾವತಿ ತಾಲೂಕು ಕುಂಚಿಟಿಗ ಸಮಾಜ ಶುಭಮಂಗಳ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ವೇಳೆ ಕುಂಚಿಟಿಗ ಸಮಾಜದ ಅಭಿವೃದ್ಧಿಗೆ ಸಹಕಾರ ನೀಡಿದ್ದರು. ಆದರೆ, ನಂತರದ ದಿನಗಳಲ್ಲಿ ಸರ್ಕಾರದ ಮುಂದಿಟ್ಟ ಅನೇಕ ಬೇಡಿಕೆಗಳು ಅನುಷ್ಠಾನಕ್ಕೆ ಬಂದಿಲ್ಲ ಎಂದರು.
ಸಬಲತೆ ಅಗತ್ಯ: ಪ್ರತಿ ಸಮಾಜದವರು ರಾಜಕೀಯ, ಸಾಮಾಜಿಕ, ಆರ್ಥಿಕವಾಗಿ ಸಬಲರಾಗಬೇಕು. ನಮ್ಮನ್ನು ನಾವೇ ಸಮರ್ಥರನ್ನಾಗಿ ಮಾಡಿಕೊಳ್ಳುತ್ತೇವೆ ಎಂಬ ಭಾವನೆ ಬರಬೇಕು ಎಂದು ಸಲಹೆ ನೀಡಿದ ಅವರು, ಈ ಸಮಾವೇಶದ ಮೂಲಕ ನಾವೆಲ್ಲರೂ ಒಂದೇ ಎಂದು ತೋರಿಸುತ್ತಿರುವುದು ಶ್ಲಾಘನೀಯ ಎಂದರು.
 ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಸಮಾಜ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಹಿಂದುಳಿದಿವೆ. ರಾಜಕೀಯ ನಾಯಕರಾದ ನಾವು ಚುನಾವಣೆಯಲ್ಲಿ ಅವರ ಬೆಳವಣಿಗೆ ಬಗ್ಗೆ ಮಾತನಾಡುತ್ತೇವೆ, ಭರವಸೆ ಕೊಡುತ್ತೇವೆ ಆದರೆ ನಂತರ ಮರೆಯುತ್ತೇವೆ.
ಈ ರೀತಿಯಾಗಬಾರದು ಎಂಬುದು ನನ್ನ ಆಶಯ ಎಂದು ತಿಳಿಸಿದರು.
ಶಿವಮೊಗ್ಗ - ಭದ್ರಾವತಿ ತಾಲೂಕು ಕುಂಚಿಟಿಗರ ಸಂಘದ ಅಧ್ಯಕ್ಷ ಬಿ.ಎಚ್. ರಾಮಚಂದ್ರ ಮಾತನಾಡಿ,  ಕುಂಚಿಟಿಗ ಸಮಾಜವನ್ನು ಒಕ್ಕಲಿಗ ಸಮಾಜದೊಂದಿಗೆ ಸೇರಿಸುವ ಕುತಂತ್ರ ನಡೆಯುತ್ತಿದ್ದು, ಇದಕ್ಕೆ ಅವಕಾಶ ಕೊಡುವುದಿಲ್ಲ ಎಂದರು.
ಶಾಸಕ ಕೆ.ಜಿ. ಕುಮಾರಸ್ವಾಮಿ, ಜಿಪಂ ಉಪಾಧ್ಯಕ್ಷ ಹೇಮಾಪಾವನಿ, ಕೆಜೆಪಿ ಜಿಲ್ಲಾಧ್ಯಕ್ಷ ಜ್ಯೋತಿಪ್ರಕಾಶ್, ನರಸಿಂಹಯ್ಯ ಹಾಜರಿದ್ದರು. ಶಿವಮೊಗ್ಗ - ಭದ್ರಾವತಿ ತಾಲೂಕು ಕುಂಚಿಟಿಗರ ಸಂಘದ ಪದಾಧಿಕಾರಿಗಳೂ ಈ ಸಂದರ್ಭದಲ್ಲಿ ಹಾಜರಿದ್ದರು. ಸಾನ್ನಿಧ್ಯ ವಹಿಸಿದ್ದ ಶಾಂತವೀರ ಶ್ರೀ ಆಶೀರ್ವಚನ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement