ಅನುತ್ತೀರ್ಣಗೊಂಡ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆ
ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿನ ಬಿ.ಎ., ಬಿ.ಎಸ್ಸಿ., ಬಿ.ಕಾಂ., ಬಿ.ಬಿ.ಎಂ., ಮತ್ತು ಬಿ.ಸಿ.ಎ., ಕಾಲೇಜುಗಳಲ್ಲಿ 2002-3ಕ್ಕೂ ಮೊದಲು ಪ್ರವೇಶ ಪಡೆದ ಎಲ್ಲಾ ನಾನ್ ಸೆಮಿಸ್ಟರ್ ವಿದ್ಯಾರ್ಥಿಗಳು ಮತ್ತು 2003-4 ಹಾಗೂ ನಂತರ ಪ್ರವೇಶ ಪಡೆದ ಎಲ್ಲಾ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ 2013ರ ಮೇ- ಜೂನ್ ಅವಧಿಯಲ್ಲಿ ಪರೀಕ್ಷೆಗೆ ಅಂತಿಮ ಅವಕಾಶ ನೀಡಲಾಗಿದೆ. ದಂಡ ಶುಲ್ಕವಿಲ್ಲದೇ ಮಾರ್ಚ್ 27ರವರೆಗೆ, 100 ದಂಡ ಶುಲ್ಕದೊಂದಿಗೆ ಏಪ್ರಿಲ್ 2ರವರೆಗೆ ಹಾಗೂ ರು. 500 ದಂಡಶುಲ್ಕದೊಂದಿಗೆ ಏಪ್ರಿಲ್ 5ರವರೆಗೆ ಪರೀಕ್ಷಾ ಶುಲ್ಕ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.
ಕುವೆಂಪು ವಿಶ್ವವಿದ್ಯಾಲಯದ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಅಂತಿಮ ಅವಕಾಶ ಇದಾಗಿದೆ. 2008-09ನೇ ಸಾಲಿನ 19ನೇ ಘಟಿಕೋತ್ಸವದಿಂದ 22ನೇ ಘಟಿಕೋತ್ಸವದವರೆಗೆ ಬಾಕಿ ಇದ್ದ ಎಲ್ಲಾ ಘಟಿಕೋತ್ಸವ ಪ್ರಮಾಣ ಪತ್ರವನ್ನು ಸಂಬಂಧಪಟ್ಟ ಕಾಲೇಜುಗಳಿಗೆ ಕಳುಹಿಸಲಾಗಿದೆ. ಘಟಿಕೋತ್ಸವ ಪ್ರಮಾಣ ಪತ್ರ ಬಾರದಿರುವ ವಿದ್ಯಾರ್ಥಿಗಳು ಕಾಲೇಜಿನ ಪ್ರಾಂಶುಪಾಲರ ಮುಖಾಂತರ ಅರ್ಜಿ ಸಲ್ಲಿಸುವಂತೆ ಕುವೆಂಪು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.