ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ನಾಳೆಯಿಂದ ಉಪನ್ಯಾಸ

Rashmi Kasaragodu
Updated On : 26 Mar 2013, 10:20 am

ಶಿವಮೊಗ್ಗ: ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಶಾಖೆಯು ವಿವಿಧ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಮೂರು ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಮಾ.27ರಂದು ಅಂಬೇಡ್ಕರ್ ಬಿಬಿಎಂ ಕಾಲೇಜಿನಲ್ಲಿ, 28ರಂದು ಅಲ್ ಮಹಮೂದ್ ಶಿಕ್ಷಣ ಮಹಾವಿದ್ಯಾಲಯದಲ್ಲಿ, 30ರಂದು ಹೊಳೆಹೊನ್ನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೆಳಿಗ್ಗೆ 11 ಗಂಟೆಗೆ ಉಪನ್ಯಾಸ ನಡೆಯಲಿದೆ.
ಮಹಿಳಾ ದಿನಾಚರಣೆ
ಶಿವಮೊಗ್ಗ: ಶಿವಮೊಗ್ಗ ಮಲ್ಟಿಪರ್ಪಸ್ ಸೋಶಿಯಲ್ ಸರ್ವಿಸ್ ಸೊಸೈಟಿಯು ಮಾ.28ರಂದು ಮಹಿಳಾ ದಿನಾಚರಣೆಯನ್ನು ಸುವರ್ಣ ಸಂಸ್ಕೃತಿ ಭವನದಲ್ಲಿ ಆಯೋಜಿಸಿದೆ. ಅಂದು ಬೆಳಿಗ್ಗೆ 10 ಗಂಟೆಗೆ ದೀಪ ಮಹಾಸಂಘದ ಅಧ್ಯಕ್ಷರಾದ ಶಾರದಮ್ಮ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಯಾಗಿ ವೀರೇಶ್ ವಿ ಮೋರಾಸ್, ನಗರಸಭೆ ಸದಸ್ಯ ಪ್ರಸನ್ನಕುಮಾರ್, ನಗರಸಭೆ ಸದಸ್ಯ ಲಕ್ಷ್ಮಮ್ಮ ಶಂಕರನಾಯ್ಕ, ಹಿರಿಯ ನ್ಯಾಯಾಧೀಶರಾದ ಬಿ.ಎಸ್.ರೇಖಾ ಉಪನ್ಯಾಸಕ ಪ್ರಸನ್ನದತ್ ಮತ್ತಿತರರು ಉಪಸ್ಥಿತರಿರುವರು.
ನಾಳೆ ಸಾಹಿತ್ಯ ಹುಣ್ಣಿಮೆ
ಶಿವಮೊಗ್ಗ: ಕನ್ನಡ ಸಾಹಿತ್ಯ ಪರಿಷತ್ತು ಮಾ.27ರಂದು ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮ ಆಯೋಜಿಸಿದೆ. ತೀರ್ಥಹಳ್ಳಿ ಶ್ರೀ ದೇವಂಗಿ ಡಿ.ಆರ್. ಮಾನಪ್ಪ ಸ್ಮಾರಕ ದತ್ತಿ ಅಂಗವಾಗಿ ಭಾರತದ ಸ್ವಾತಂತ್ರ್ಯ ಹೋರಾಟದ ಆಶಯ, ಸಮಕಾಲೀನ ಸವಾಲುಗಳು ಕುರಿತಾಗಿ ಉಪನ್ಯಾಸವನ್ನು ಡಾ.ಜೆ.ಎಸ್ ಸದಾನಂದ ನೀಡುವರು. ಕಾರ್ಯಕ್ರಮವನ್ನು ದತ್ತಿ ದಾನಿ ಡಿ.ಎಂ. ಮನುದೇವ್ ಉದ್ಘಾಟಿಸುವರು. ಕಸಾಪ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಯಾಗಿ ಎಪಿಎಂಸಿ ಕಾರ್ಯದರ್ಶಿ ಡಾ. ಶರಶ್ಚಂದ್ರ ರಾನಡೆ ಪಾಲ್ಗೊಳ್ಳುವರು. ಬಿ.ಮಮತಾ ಅವರಿಂದ ಗಾಯನ, ಪ್ರಕಾಶ್ ಆರ್ ಕಮ್ಮಾರ್, ಡಿ. ಗಣೇಶ್, ಹರಿಕುಮಾರ್, ಶ್ರೀನಿವಾಸ ನಗಲಾಪುರ, ದತ್ತಾತ್ರಿ ಜೋಯ್ಸ್ ಅವರಿಂದ ಕವನ ವಾಚನ ನಡೆಯುವುದು. ಸುಮಿತ್ರಾ ನಿಕ್ಕಂ, ಅನಂತು, ಕೆ.ಜಯಶ್ರೀ ಚುಟುಕು ಪ್ರಸ್ತುತಪಡಿಸುವರು. ಕಾರ್ಯಕ್ರಮ ಕಸಾಪ ಆವರಣದಲ್ಲಿ ನಡೆಯುವುದು.
ಉಪನ್ಯಾಸ
ಶಿವಮೊಗ್ಗ: ಕರ್ನಾಟಕ ಸಂಘವು ಕನ್ನಡ ವೈದ್ಯ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಮಾ.30ರಂದು ಸಂಜೆ 5.30ಕ್ಕೆ ಸಂಘದ ಸಭಾಂಗಣದಲ್ಲಿ ವಿಶೇಷ ಉಪನ್ಯಾಸ ಹಮ್ಮಿಕೊಂಡಿದೆ. ಡಾ. ಇಂದಿರಾ ಜಯಪ್ರಕಾಶ್ ಅವರು ಆಪ್ಯಾಯಮಾನ ವೃದ್ಧಾಪ್ಯ ವಿಷಯವಾಗಿ ಉಪನ್ಯಾಸ ನೀಡುವರು. ಡಾ. ಸಿ.ಜಿ. ಕೇಶವಮೂರ್ತಿ ಉಪಸ್ಥಿತರಿರಲಿದ್ದು, ಕರ್ನಾಟಕ ಸಂಘದ ಅಧ್ಯಕ್ಷ ತಿಮ್ಮಯ್ಯ ಅಧ್ಯಕ್ಷತೆ ವಹಿಸುವರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement