ಪತ್ನಿಯನ್ನು ಗೋಡೆಗೆ ತಳ್ಳಿ ಹತ್ಯೆ ಮಾಡಿದ ಪತಿ
ಶಿಕಾರಿಪುರ: ಮದ್ಯವ್ಯಸನಿಯೊಬ್ಬ ಅಡುಗೆ ಸರಿಯಲ್ಲ ಎಂಬ ನೆಪವೊಡ್ಡಿ ಪತ್ನಿಯನ್ನು ಗೋಡೆಗೆ ತಳ್ಳಿ ಹತ್ಯೆ ಮಾಡಿದ ಘಟನೆ ಪಟ್ಟಣದ ಆಶ್ರಯ ಬಡಾವಣೆಯಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ.
ಆಶಾಬಾನು (27) ಮೃತ ಮಹಿಳೆ. 3 ಮಕ್ಕಳ ತಾಯಿಯಾಗಿ ಇದೀಗ 8 ತಿಂಗಳ ಗರ್ಭಿಣಿಯಾಗಿದ್ದ ಈಕೆಯನ್ನು ಮದ್ಯ ವ್ಯಸನಿಯಾಗಿದ್ದ ಪತಿ ಭಾನುವಾರ ರಾತ್ರಿಯ ಅಡುಗೆ ಸರಿಇಲ್ಲ ಎಂದು ಗದ್ದಲ ನಡೆಸಿ ನಂತರದಲ್ಲಿ ಮನೆಯ ಗೋಡೆಗೆ ತಳ್ಳಿದ ಪರಿಣಾಮ ಆಶಾಬಾನು ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.
ಸೋಮವಾರ ಬೆಳಗ್ಗೆ ವಿಷಯ ತಿಳಿದ ಸಮೀಪವರ್ತಿಗಳು ಪೊಲೀಸರಿಗೆ ಸುದ್ದಿ ತಿಳಿಸಿದ್ದು, ಸ್ಥಳಕ್ಕೆ ಸಿಪಿಐ ಮಾದಪ್ಪ ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ. ಶಿಕಾರಿಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.