ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸ್ಥಿತಿವಂತರೇ ಮತ ಮಾರಿಕೊಳ್ಳುತ್ತಿದ್ದಾರೆ

Rashmi Kasaragodu
Updated On : 26 Mar 2013, 10:21 am

ಕ.ಪ್ರ.ವಾರ್ತೆ ಟಿ ಚಿಕ್ಕಮಗಳೂರು ಟಿ  ಮಾ.25
ಆರ್ಥಿಕವಾಗಿ ಸ್ಥಿತಿವಂತರಾಗಿರುವವರೆ ಮತ ಮಾರಿಕೊಳ್ಳುವ ಪರಿಸ್ಥಿತಿ ಎದುರಾದರೆ ಯಾವ ರೀತಿ ಚುನಾವಣೆ ಎದುರಿಸುವುದು ಎಂಬ ಪ್ರಶ್ನೆ ಉದ್ಭವಿಸಿದೆ ಎಂದು ಮಾಜಿ ಶಾಸಕ ಎಸ್.ಎಲ್. ಧರ್ಮೇಗೌಡ ವಿಷಾದ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಸೋಮವಾರ ನಡೆದ ಪಕ್ಷದ ಕ್ಷೇತ್ರ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ರಾಜಕೀಯದಲ್ಲಿ ಮಂಡಲ ಪಂಚಾಯಿತಿಯಿಂದ ಅಧಿಕಾರ ಅನುಭವಿಸಿದ್ದೇನೆ. ಎಲ್ಲೂ ನಾನು ಹಣ ಹೊಡೆಯಬೇಕೆಂಬ ಕಲ್ಪನೆ ಮಾಡಲಿಲ್ಲ, ಬಿಜೆಪಿಯವರು ಭ್ರಷ್ಟಾಚಾರದಿಂದ ಗಳಿಸಿದ ಹಣದಲ್ಲಿ ಮಾಡುವ ಎಲ್ಲಾ ಅಕ್ರಮಗಳನ್ನು ತಡೆಯುವ ಶಕ್ತಿಯು ನನಗಿಲ್ಲ. ಈ ಸಂದರ್ಭದಲ್ಲಿ ಚುನಾವಣೆ ಎದುರಿಸುವುದು ಬಹಳ ಕಠಿಣ ಎಂದರು. ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಅಧಿಕಾರಿಗಳು ರವಿಯವರ ಅಡಿಯಾಳಾಗಿ ಕೆಲಸ ಮಾಡುತ್ತಿರುವುದರಿಂದ ನನ್ನನ್ನು ನಂಬಿದ ಬಹಳಷ್ಟು ಬಡವರಿಗೆ ರೇಷನ್ ಕಾರ್ಡ್ ಸಹ ಕೊಡಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ಊಟವಿಲ್ಲದಿದ್ದರು ಕಾರ್ಯಕರ್ತರು ಹಟ ಹಿಡಿದು ರಾಜಕಾರಣ ಮಾಡಿ ಪಕ್ಷಕ್ಕೆ ಗಟ್ಟಿಯಾಗಿ ನಿಲ್ಲುತ್ತಿದ್ದರ. ಇಂದು ಹಣ ಮತ್ತು ಆಮಿಷಕ್ಕೆ ಒಳಗಾಗಿ ಮತ ಮಾರಿಕೊಳ್ಳುತ್ತಿದ್ದಾರೆ ಎಂದು ಅಸಮಾದಾನ ವ್ಯಕ್ತಪಡಿಸಿದರು. ಸಹೋದರ ಎಸ್.ಎಲ್. ಭೋಜೆಗೌಡ ಮತ್ತು ನಾನು ಇಬ್ಬರು ಒಂದೊಂದು ಕ್ಷೇತ್ರದಲ್ಲಿ ಚುನಾವಣೆ ನಿಲುವುದಾಗಿ ಅಪಪ್ರಚಾರ ಮಾಡಿದ್ದಾರೆ. ಚಿಕ್ಕಮಗಳೂರು ಕ್ಷೇತ್ರದಿಂದ ನಾನು ಮಾತ್ರ ಸ್ಪರ್ಧಿಸುತ್ತೇನೆ ಎಂದು ಸ್ಪಷ್ಟಪಡಿಸಿದ ಅವರು, ಕಾರ್ಯಕರ್ತರ ಹಿತದೃಷ್ಠಿಯಿಂದ ಕೊನೆಗಳಿಗೆಯಲ್ಲಿ ಬದಲಾವಣೆ ಕಂಡು ಬಂದರೆ ನೀವು ನನ್ನ ಜೊತೆ ಇರಬೇಕೆಂದು ಮನವಿ ಮಾಡಿದರು.
ಜಿಲ್ಲಾ ಕಾರ್ಯಾಧ್ಯಕ್ಷ ಭೋಜೆಗೌಡ ಮಾತನಾಡಿ, ಚುನಾವಣೆಗಳ ಬಗ್ಗೆ ನಮಗೂ ಅರಿವಿದೆ, ತರೀಕೆರೆ ಕ್ಷೇತ್ರದಲ್ಲಿ ನಾನು ಸ್ಪರ್ಧಿಸುವುದಿಲ್ಲ, ಈ ಬಗ್ಗೆ ನಮ್ಮ ಕಾರ್ಯಕರ್ತರಲ್ಲಿ ಗೊಂದಲ ತುಂಬಿದವರು ಯಾರು ಎಂದ  ಅವರು, ಕಳೆದ 30 ವರ್ಷದಿಂದ ರಾಜಕಾರಣ ಮಾಡಿದ್ದೀವಿ, ಕಷ್ಟ ಸುಖಕ್ಕೆ ಸ್ಪಂದಿಸಿದ್ದೇವೆ ಎಂದರು.
ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಸಚಿವ ಮತ್ತು ಅವರ ಸಹೋದ್ಯೊಗಿಗಳಿಗೆ ಎಲ್ಲಾ ಕಾಂಟ್ರ್ಯಾಗಳನ್ನು ನೀಡಿ ಸಾಮಾನ್ಯ ಜನರು ತಿನ್ನುವ ಅನ್ನಕ್ಕೆ ಕಲ್ಲು ಹಾಕಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಮಂಜಪ್ಪ ಅಧ್ಯಕ್ಷತೆ ವಹಿಸಿದ್ದರು. ಅಕ್ಮಲ್, ಚಂದ್ರಪ್ಪ, ಹೊಲದಗದ್ದೆ ಗಿರೀಶ್, ಬೈರೇಗೌಡ, ಅನಿಲ್ ಕುಮಾರ್, ಚಂದ್ರೇಗೌಡ, ಜಯಂತಿ, ಸೌಭಾಗ್ಯ, ಚಂದ್ರಶೇಖರ್,ಚಿನ್ನಯ್ಯ, ಎಂ.ಡಿ. ರಮೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement