29ರಿಂದ ಸಿಇಟಿ ತರಬೇತಿ ಶಿಬಿರ
ಶಿವಮೊಗ್ಗ: ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ನೌಕರರ ಒಕ್ಕೂಟ ಮಾರ್ಚ್ 29ರಿಂದ ಎಪ್ರಿಲ್ 15 ರವರೆಗೆ ದುರ್ಗಿಗುಡಿಯ ಅನುದಾನಿತ ಶಾಲೆಗಳ ನೌಕರರ ಸಹಕಾರ ಸಂಘದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ 15 ದಿನಗಳ ಕಾಲ ಸಿಇಟಿ ತರಬೇತಿ ಶಿಬಿರ ಹಮ್ಮಿಕೊಂಡಿದೆ.
ನುರಿತ ಉಪನ್ಯಾಸಕರಿಂದ ಪ್ರತಿನಿತ್ಯ ಎರಡು ವಿಷಯಗಳ ಎರಡು ಪರೀಕ್ಷೆಗಳು, ಚರ್ಚೆ, ಬೋಧನೆ ಮಾದರಿಯಲ್ಲಿ ತರಬೇತಿ ನೀಡಲಾಗುವುದು. ತರಬೇತಿ ಪಡೆಯುವ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಭೋಜನದ ವ್ಯವಸ್ಥೆ, ಹೊರ ಊರುಗಳಿಂದ ಬರುವ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಒಕ್ಕೂಟದ ಉಪಾಧ್ಯಕ್ಷ ಎಂ.ಎಚ್. ಕೃಷ್ಣಮೂರ್ತಿ ತಿಳಿಸಿದ್ದಾರೆ.