ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಆಯನೂರು ಉದ್ವಿಗ್ನ

Rashmi Kasaragodu
Updated On : 27 Mar 2013, 10:40 am

ಶಿವಮೊಗ್ಗ: ಕೆಲ ಕಿಡಿಗೇಡಿಗಳು ಆಯನೂರಿನ ಗ್ರಾಪಂ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಷಣ್ಮುಖಪ್ಪ ಗೌಡರ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿದ್ದರಿಂದ ಮಂಗಳವಾರ ಆಯನೂರಿನಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು.
ಗ್ರಾಪಂ ಸದಸ್ಯ ಷಣ್ಮುಖಪ್ಪ ಗೌಡರು ಪಂಚಾಯಿತಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವಾಗ ಅಫ್ರೋಜ್, ಫೈರೋಜ್ ಹಾಗೂ ಮುಜಾಯಿದ್ ಸೇರಿದಂತೆ ಯುವಕರ ಗುಂಪು ಉಪಾಧ್ಯಕ್ಷ ಚಂದ್ರಪ್ಪ ಅವರ ಎದುರಿನಲ್ಲೇ ಷಣ್ಮುಖಪ್ಪ ಗೌಡರನ್ನು ಥಳಿಸಿದ್ದಾರೆ. ಈ ಘಟನೆ ತಿಳಿದ ಸ್ಥಳೀಯ ಯುವಕರು ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಬಸ್ ನಿಲ್ದಾಣದ ಆವರಣದಲ್ಲಿರುವ ಕೆಲ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿಸಿದರು.
ಆಗಿದ್ದಿಷ್ಟು: ಹಾಲಿ ಗ್ರಾಪಂ ಸದಸ್ಯ ಷಣ್ಮುಖಪ್ಪಗೌಡರು ಇಲ್ಲಿನ ನ್ಯಾಯ ಬೆಲೆ ಅಂಗಡಿ ಮಾಲೀಕರಾಗಿದ್ದು, ಪಡಿತರ ಕೇಳಲು ಬಂದ ಯುವಕರಿಗೆ ಪಡಿತರ ವಿತರಿಸಿದ್ದರು. ಆದರೆ, ಯುವಕರು ಮತ್ತಷ್ಟು ಪಡಿತರ ನೀಡುವಂತೆ ಒತ್ತಾಯಿಸಿದ್ದಾರೆ. ಈ ವೇಳೆ ಹೆಚ್ಚಾಗಿ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ. ಇದನ್ನು ವಿರೋಧಿಸಿದ ಯುವಕರು ಗ್ರಾಪಂ ಕಚೇರಿಯಲ್ಲಿ ಷಣ್ಮುಖಪ್ಪ ಮೇಲೆ ಹಲ್ಲೆ ನಡೆಸಿದ್ದಾರೆ.
ಅಫ್ರೋಜ್‌ನನ್ನು ಬಂಧಿಸಲಾಗಿದ್ದು, ಉಳಿದಂತೆ ಫೈರೋಜ್ ಹಾಗೂ ಮುಜಾಯಿದ್ ತಪ್ಪಿಸಿಕೊಂಡಿದ್ದಾರೆ. ಪ್ರಕರಣ ಕುಂಸಿ ಠಾಣೆಯಲ್ಲಿ ದಾಖಲಾಗಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗುವ ಹಂತದಲ್ಲಿ ಮಧ್ಯ ಪ್ರವೇಶಿಸಿದ ಸ್ಥಳೀಯ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಲು ಹರಸಾಹಸ ಪಟ್ಟರು. ಸ್ಥಳದಲ್ಲಿ ಡಿ.ವೈ.ಎಸ್.ಪಿ. ರಾಮನಾಯ್ಕ, ಸರ್ಕಲ್ ಇನ್ಸ್‌ಪೆಕ್ಟರ್ ಬಸವರಾಜಪ್ಪ, ಕುಂಸಿ ಠಾಣೆ ಪಿಎಸ್‌ಐ ಅಭಯ್ ಪ್ರಕಾಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement