ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಉದ್ಯೋಗ ತರಗತಿಗೆ ಅರ್ಜಿ ಆಹ್ವಾನ

Rashmi Kasaragodu
Updated On : 27 Mar 2013, 10:42 am

ಶಿವಮೊಗ್ಗ: ಹಳಿಯಾಳದ ರುಡ್‌ಸೆಟ್ ಸಂಸ್ಥೆ, ಕೆನರಾ ಬ್ಯಾಂಕ್ ಮತ್ತು ವಿ.ಆರ್.ಡಿ.ಎಂ. ಟ್ರಸ್ಟ್‌ಗಳ ಆಶ್ರಯದಲ್ಲಿ ಸ್ವ- ಉದ್ಯೋಗ ಮತ್ತು ವೇತನ ಆಧಾರಿತ ಉದ್ಯೋಗ ತರಬೇತಿಗಳಿಗೆ ಆಸಕ್ತ ಯುವಕ- ಯುವತಿಯರಿಂದ ಅರ್ಜಿ ಆಹ್ವಾನಿಸಿದೆ.
   ಮೇ 14ರಿಂದ ಜೂನ್ 12 ರವರೆಗೆ ಪುರುಷರ ಟೈಲರಿಂಗ್ ತರಬೇತಿ, ಮೇ 8 ರಿಂದ 12 ರವರೆಗೆ ಹೈನುಗಾರಿಕೆ ತರಬೇತಿ ಹಾಗೂ ಮೇ 20 ರಿಂದ ಜೂನ್ 3 ರವರೆಗೆ ಬೇಕರಿ ಮತ್ತು ಗೃಹೋಪಯೋಗಿ ಉತ್ಪನ್ನಗಳ ತಯಾರಿಕಾ ತರಬೇತಿಯನ್ನು ಏರ್ಪಡಿಸಲಾಗಿದೆ. ತರಬೇತಿ ಪಡೆಯಲಿಚ್ಚಿಸುವ ಅಭ್ಯರ್ಥಿಗಳು ತಮ್ಮ ಹೆಸರು, ವಿಳಾಸ, ವಯಸ್ಸು, ವಿದ್ಯಾರ್ಹತೆ, ದೂರವಾಣಿ ಮೊಬೈಲ್ ಇತ್ಯಾದಿ ವಿವರಗಳೊಂದಿಗೆ ತರಬೇತಿ ವಿಷಯ ಮುಂತಾದ ಮಾಹಿತಿಯ ಅರ್ಜಿಯನ್ನು ವ್ಯವಸ್ಥಾಪಕರು, ದೇಶಪಾಂಡೆ ರುಡ್‌ಸೆಟ್ ಸಂಸ್ಥೆ (ರಿ.) ಉದ್ಯೋಗ ವಿದ್ಯಾನಗರ, ದಾಂಡೇಲಿ ರಸ್ತೆ, ಹಳಿಯಾಳ- 591329, (ಉ.ಕ. ಜಿಲ್ಲೆ) ಇವರಿಗೆ ಸಲ್ಲಿಸಬೇಕು. ವಿವರಗಳಿಗಾಗಿ- 9482188780.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement