ನೇತ್ರ ತಪಾಸಣೆ (ಸುದ್ದಿ ಸಂಕ್ಷೇಪ)
ಶಿವಮೊಗ್ಗ: ಗಾಂಧಿನಗರದಲ್ಲಿರುವ ಗುರು ಕಣ್ಣಿನ ಆಸ್ಪತ್ರೆಯಲ್ಲಿ ಮಾರ್ಚ್ 30 ರಂದು ಬೆಳಿಗ್ಗೆ 8 ಗಂಟೆಯಿಂದ ಕಣ್ಣಿನ ಪೊರೆ ಬಂದಂತಹ ಬಡವರಿಗೆ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿದ್ದು, ಅರ್ಹರಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತದೆ. ಅರ್ಹರು ಬೆಳಿಗ್ಗೆ 10ಗಂಟೆಯೊಳಗೆ ಹೆಸರು ನೋಂದಾಯಿಸಿ ಟೋಕನ್ ಪಡೆಯಬಹುದು ಎಂದು ಆಸ್ಪತ್ರೆಯ ವೈದ್ಯ ಎಚ್.ವಿ. ಗಿರಿಸ್ವಾಮಿ ರಸ್ತಾಪುರಮಠ ತಿಳಿಸಿದ್ದಾರೆ. ವಿವರಗಳಿಗಾಗಿ- 08182-270647.
ರಾಜಿನಾಮೆ
ಶಿವಮೊಗ್ಗ: ಜೆಡಿಎಸ್ನ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸೈಯದ್ ಶಮೀರ್ ಹಾಗೂ ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಉಪಾಧ್ಯಕ್ಷ ರಹೀಂ ಶರೀಫ್ ಅವರು ಜೆಡಿಎಸ್ಗೆ ರಾಜಿನಾಮೆ ನೀಡಿದ್ದಾರೆ.
ಪಂಚಾಮೃತಾಭಿಷೇಕ
ಶಿವಮೊಗ್ಗ: ಕೋಟೆ ರಸ್ತೆಯ ಶ್ರೀ ಶನೈಶ್ಚರ ಸೇವಾ ಸಮಿತಿ ಟ್ರಸ್ಟ್ ಮಾರ್ಚ್ 27 ರಂದು ಹುಣ್ಣಿಮೆಯ ಪ್ರಯುಕ್ತ ಶ್ರೀ ಸನ್ನಿಧಿಯಲ್ಲಿ ಬೆಳಿಗ್ಗೆ 6.30ರಿಂದ 7.15ರವರೆಗೆ ಸತ್ಯನಾರಾಯಣ ಸ್ವಾಮಿಯ ಮೂಲಬಿಂಬಕ್ಕೆ ಪಂಚಾಮೃತ ಅಭಿಷೇಕ ಏರ್ಪಡಿಸಿದೆ. ಮಾಹಿತಿಗೆ ಮೊ.9449699584.