ಭದ್ರಾವತಿಯಲ್ಲಿ ಉಚಿತ ರಕ್ತ ಪರೀಕ್ಷಾ ಶಿಬಿರ
ಕ.ಪ್ರ. ವಾರ್ತೆ ಭದ್ರಾವತಿ ಮಾ.26
ಪ್ರಾಥಮಿಕ ಆರೋಗ್ಯ ಕೇಂದ್ರ ಅರಬಿಳಚಿ ಹಾಗೂ ಕೂಡ್ಲಿಗೆರೆ ಗ್ರಾಮ ಪಂಚಾಯಿತಿಯ ಸಂಯುಕ್ತಾಶ್ರಯದಲ್ಲಿ ಹಳೆ ಕೂಡ್ಲಿಗೆರೆ ಗ್ರಾಮದಲ್ಲಿ ಉಚಿತ ಕಫ ಮತ್ತು ರಕ್ತ ಪರೀಕ್ಷಾ ಶಿಬಿರವನ್ನು ಮಂಗಳವಾರ ಏರ್ಪಡಿಸಲಾಗಿತ್ತು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಿಬಾಯಿ ಕುಬೇರನಾಯ್ಕ ದೀಪ ಬೆಳಗಿಸುವ ಮೂಲಕ ಶಿಬಿರವನ್ನು ಉದ್ಘಾಟಿಸಿದರು. ಅರಬಿಳಚಿ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಯೋಗಶಾಲಾ ತಜ್ಞ ರಾಘವೇಂದ್ರ ಈ ಸಂದರ್ಭದಲ್ಲಿ ಮಾತನಾಡಿ, ಎರಡು ವಾರದಿಂದ ಕೆಮ್ಮು ಇರವವರು ಕಫ ಪರೀಕ್ಷೆ ಮಾಡಿಸಬೇಕು. ಒಂದುವೇಳೆ ಕ್ಷಯರೋಗವಿದ್ದರೆ ಇದರಿಂದ ದೃಢಪಡುವುದು ಎಂದು ತಿಳಿಸಿದರು.
ರಕ್ತಪರೀಕ್ಷೆ ಮಾಡಿಸುವುದರಿಂದ ಮದುಮೇಹ ಕಾಯಿಲೆ ಪತ್ತೆಹಚ್ಚಬಹುದೆಂದು ಅವರು ತಿಳಿಸಿದ ಅವರು, ಜನರು ಈ ಶಿಬಿರದ ಸದುಪಯೋಗ ಪಡೆಯಬೇಕೆಂದು ಕರೆನೀಡಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಅನ್ನಪೂರ್ಣ ಮತ್ತು ಎಲ್ಲಾ ಗ್ರಾ.ಪಂ. ಸದಸ್ಯರುಗಳು ಹಾಜರಿದ್ದರು. ಕೋರ್ ಸಂಸ್ಥೆಯ ಕಾರ್ಯಕರ್ತರು ಭಾಗವಹಿಸಿ ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.