ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ರಕ್ಕಸ ಗಾನವಾದ ಯಕ್ಷಗಾನ: ನಾರಾಯಣ ಹೆಗಡೆ ವಿಷಾದ

Rashmi Kasaragodu
Updated On : 27 Mar 2013, 10:42 am

ಕ.ಪ್ರ.ವಾರ್ತೆ ೤ ಸೊರಬ ೤ಮಾ.26
ಯಕ್ಷಗಾನವಿಂದು ರಕ್ಕಸ ಗಾನವಾಗಿದೆ ಎಂದು ಯಕ್ಷ ಕಲಾವಿದ, ರಾಜ್ಯಪ್ರಶಸ್ತಿ ವಿಜೇತ ಗೋಡೆ ನಾರಾಯಣ ಹೆಗಡೆ ವಿಷಾದ ವ್ಯಕ್ತಪಡಿಸಿದರು.
   ಪಟ್ಟಣದ ವಿಶ್ವಕರ್ಮ ಸಮಾಜ, ಮಹಾಗಣಪತಿ ಧರ್ಮದರ್ಶಿ ಟ್ರಸ್ಟ್, ಯಕ್ಷಗಾನ ಕಲಾ ಬಳಗದವರಿಂದ ಏರ್ಪಡಿಸಿದ್ದ ಯಕ್ಷಗಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಯಕ್ಷಗಾನವಿಂದು ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿದೆ.
   ಜನತೆಯನ್ನು ಒಗ್ಗೂಡಿಸುವ, ನಮ್ಮ ನಾಡು,ನುಡಿ, ಪಾರಂಪರಿಕ ಮೌಲ್ಯವನ್ನು , ಪುರಾಣ, ಧರ್ಮ, ವೇದಾಂತದ ಪ್ರಜ್ಞೆಯನ್ನು ಎತ್ತಿಹಿಡಿವ ಯಕ್ಷಗಾನದ ಆತ್ಮ ಸಂಸ್ಕಾರವಿಂದು ವ್ಯಾಪಾರೀ ಮನೋಭಾವನೆಯಿಂದಾಗಿ ಜನತೆಗೆ ಉತ್ತಮ ಸಂದೇಶವನ್ನು ನೀಡುವಲ್ಲಿ ಸೋತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ದೇಶಿಯ ಸಂಸ್ಕೃತಿಯ ಸೊಗಡನ್ನು ಬಹುಕಾಲದಿಂದಲೂ ಕಟ್ಟಿಕೊಂಡು, ಬೆಳೆಸುತ್ತ ಬಂದಿರುವ ಯಕ್ಷಗಾನದಂತಹ ಆತ್ಮ ಸಂಸ್ಕಾರ ನೀಡುವ ಕಲೆಯನ್ನು ಉಳಿಸಲು ಕಲಾವಿದರೊಂದಿಗೆ ಪ್ರೇಕ್ಷಕರು ಕೈಜೋಡಿಸಬೇಕು ಎಂದು ಕರೆ ನೀಡಿದರು.
   ಸಮಾಜದ ಅಧ್ಯಕ್ಷ ಕೇಶವಾಚಾರ್ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್‌ನ ಪ್ರಶಾಂತ ಮೇಸ್ತ್ರಿ, ಬಳಗದ ಎಂ.ಕೆ. ಭಟ್, ಮಧುರಾಯ ಜಿ. ಶೇಟ್, ಸುಬ್ರಹ್ಮಣ್ಯ ಗುಡಿಗಾರ್, ದತ್ತಾತ್ರೇಯ ಪುರಾಣಿಕ್, ಹರೀಶಿ ಶ್ರೀನಿವಾಸ ಭಟ್, ದಿನಕರಭಟ್ ಭಾವೆ, ಸತ್ಯನಾರಾಯಣ್ ಭಟ್, ರಾಘವೇಂದ್ರ, ದಿವಾಕರ ಭಾವೆ, ವೈ.ಜಿ. ಪುಟ್ಟಸ್ವಾಮಿ, ಎಸ್. ಕೃಷ್ಣಾನಂದ್, ಷಣ್ಮುಖಾಚಾರ್, ಧರ್ಮರಾಜ್ ಆಚಾರ್, ಶಿವಾನಂದಾಚಾರ್, ದತ್ತಾತ್ರೇಯಾ ಆಚಾರ್, ಜಿ. ಸಿದ್ಧಬಸಪ್ಪ, ಇತರರು ಈ ಸಂದರ್ಭದಲ್ಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement