ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ವೇಳಾಪಟ್ಟಿ ಪರಿಷ್ಕರಿಸಿ ನಿರ್ಣಯ

Rashmi Kasaragodu
Updated On : 27 Mar 2013, 10:42 am

ಕ.ಪ್ರ.ವಾರ್ತೆ ೤ ಶಿವಮೊಗ್ಗ ೤ ಮಾ.26
ಭದ್ರಾ ಜಲಾಶಯದಲ್ಲಿ ಲಭ್ಯವಿರುವ ನೀರನ್ನು ಭದ್ರಾ ಅಚ್ಚುಕಟ್ಟಿನಲ್ಲಿ ಬೆಳೆದು ನಿಂತಿರುವ ಬೆಳೆಗಳಿಗೆ ಹಾಗೂ ಕುಡಿಯುವ ನೀರಿಗೆ ಬಿಡುಗಡೆ ಮಾಡುವ ಕುರಿತು ಭದ್ರಾ ಕಾಡಾ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವೇಳಾಪಟ್ಟಿಯನ್ನು ಪರಿಷ್ಕರಿಸಿ ನಿರ್ಣಯ ಕೈಗೊಳ್ಳಲಾಗಿದೆ.    
ಭದ್ರಾ ಎಡದಂಡೆ ನಾಲೆಯಲ್ಲಿ ಮಾ.22 ರಿಂದ ಏ.2 ರವರೆಗೆ, ಏ. 8 ರಿಂದ 17 ರವರೆಗೆ, ಏ.27 ರಿಂದ ಮೇ 7ರವರೆಗೆ, ಭದ್ರಾ ಬಲದಂಡೆ ನಾಲೆ 103 ಕಿ.ಮೀ.ವರೆಗಿನ ನಾಲೆಗಳಲ್ಲಿ ಮಾರ್ಚ್ 11 ರಿಂದ 31 ರವರೆಗೆ, ಏ. 8ರಿಂದ ಮೇ 7ರವರೆಗೆ ಹಾಗೂ ಭದ್ರಾ ಎಡದಂಡೆ ನಾಲೆ 103 ಕಿ.ಮೀ. ನಂತರದ ನಾಲೆಗಳಲ್ಲಿ ಮಾರ್ಚ್ 11 ರಿಂದ 31 ರವರೆಗೆ, ಏ.8ರಿಂದ ಮೇ 14 ರವರೆಗೆ ನೀರನ್ನು ಹರಿಸಲಾಗುವುದು. ಉಳಿದ ಅವಧಿಯಲ್ಲಿ ನೀರನ್ನು ಸ್ಥಗಿತಗೊಳಿಸಲಾಗವುದೆಂದು ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿ ಬಿ.ಎನ್. ಫಣಿರಾಜು ತಿಳಿಸಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಬಹಳ ಕಡಿಮೆ ಇರುವ ಕಾರಣ, ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದು ನಿಂತ ಬೆಳೆಗಳಾದ ತೋಟ, ಕಬ್ಬು ಮತ್ತು ಅರೆನೀರಾವರಿ ಬೆಳೆಗಳಿಗೆ ಮಾತ್ರ ನೀರನ್ನು ಒದಗಿಸಲು ನಿರ್ಣಯ ಕೈಗೊಳ್ಳಲಾಗಿದೆ. ಆದ್ದರಿಂದ ರೈತರು ಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚು ನೀರುಣ್ಣುವ ಭತ್ತವನ್ನು ಬೆಳೆಯದೇ, ಅರೆ ನೀರಾವರಿ ಬೆಳೆಯನ್ನು ಮಾತ್ರ ಬೆಳೆಯುವಂತೆ ಸೂಚಿಸಲಾಗಿದೆ. ನಿಯಮ ಉಲ್ಲಂಘಿಸಿ ಬೇರೆ ಬೆಳೆಯನ್ನು ಬೆಳೆದರೆ ಜಲಸಂಪನ್ಮೂಲ ಇಲಾಖೆಯು ಜವಾಬ್ದಾರಿಯಾಗಿರುವುದಿಲ್ಲ. ಇಲಾಖೆಯೊಂದಿಗೆ ಸಹಕರಿಸುವಂತೆ ಅಧೀಕ್ಷಕ ಅಭಿಯಂತರರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement