ಶಿವಮೊಗ್ಗದ್ಲಲಿ ವಿಶ್ವರಂಗಭೂಮಿದಿನಾಚರಣೆ
ಶಿವಮೊಗ್ಗ: ನಗರದ ಸಹ್ಯಾದ್ರಿ ರಂಗ ತರಂಗದ ವತಿಯಿಂದ ಬುಧವಾರ ಮೂರು ಕಡೆ ವಿಶ್ವ ರಂಗಭೂಮಿ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 10.30 ಕ್ಕೆ ರಾಷ್ಟ್ರೀಯ ಶಿಕ್ಷಣ ಸಮಿತಿಯ ಬಿಇಡಿ ಕಾಲೇಜಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಎನ್‌ಇಎಸ್ ಕಾರ್ಯದರ್ಶಿ ಎಸ್.ವಿ. ತಿಮ್ಮಯ್ಯ ಉದ್ಘಾಟಿಸಲಿದ್ದಾರೆ.
ವಿದ್ಯಾರ್ಥಿ ದಿಸೆಯಲ್ಲಿ ರಂಗಭೂಮಿ ಚಟುವಟಿಕೆ ಕುರಿತು ರಂಗಕರ್ಮಿ ಇಟಗಿ ಈರಣ್ಣ ಉಪನ್ಯಾಸ ನೀಡುವರು. ಮಧ್ಯಾಹ್ನ 12ಕ್ಕೆ ಕುವೆಂಪು ಶತಮಾನೋತ್ಸವ ಬಿಇಡಿ ಕಾಲೇಜಿನಲ್ಲಿ ಹಾಗೂ ಮಧ್ಯಾಹ್ನ 3.30 ಕ್ಕೆ ಜಿಲ್ಲಾ ಶಿಕ್ಷಕ ರ ತರಬೇತಿ ಕೇಂದ್ರದಲ್ಲಿ ವಿಶ್ವ ರಂಗಭೂಮಿ ದಿನಾಚರಣೆಯನ್ನು ಹಮ್ಮಿಕೊಂಡಿದ್ದು, ರಂಗಕರ್ಮಿಗಳು, ರಂಗಾಸಕ್ತರು ಆಗಮಿಸುವಂತೆ ಕಾಂತೇಶ್ ಕದರಮಂಡಲಗಿ ಕೋರಿದ್ದಾರೆ.