ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಅಸಮರ್ಪಕ ಕುಡಿಯುವ ನೀರು: ಪ್ರತಿಭಟನೆ

Rashmi Kasaragodu
Updated On : 28 Mar 2013, 10:35 am

ಕ.ಪ್ರ.ವಾರ್ತೆ೤ಸಾಗರ೤ಮಾ.27
ಕಳೆದ ನಾಲ್ಕೈದು ತಿಂಗಳುಗಳಿಂದ ಕುಡಿಯುವ ನೀರು ಪೂರೈಸದ ಗ್ರಾಮ ಪಂಚಾಯ್ತಿಯ ಆಡಳಿತ ವೈಖರಿಯನ್ನು ಖಂಡಿಸಿ ಮಂಗಳವಾರ ತಾಲೂಕಿನ ಆಚಾಪುರ ಗ್ರಾಮಸ್ಥರು ಪಂಚಾಯ್ತಿ ಎದುರು ಖಾಲಿಕೊಡಪಾನ ಪ್ರದರ್ಶನ ಮಾಡಿ ಪ್ರತಿಭಟಿಸಿದರು.
  ಆಚಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಆಚಾಪುರ ಗ್ರಾಮದಲ್ಲಿ ಕಳೆದ ನಾಲ್ಕೈದು ತಿಂಗಳುಗಳಿಂದ ಗ್ರಾಮಸ್ಥರು ಕುಡಿಯುವ ನೀರಿಗೆ ಹಾಹಾಕಾರ ಅನುಭವಿಸುವಂತೆ ಆಗಿದೆ. ನೀರಿನ ಸಮಸ್ಯೆ ಬಗೆಹರಿಸಲು ಪಂಚಾಯ್ತಿಗೆ ಹತ್ತಾರು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೆ ಕ್ರಮ ತೆಗೆದುಕೊಳ್ಳದೆ ಇರುವುದು ಖಂಡನೀಯ. ಆಡಳಿತ ವ್ಯವಸ್ಥೆ ಜನರ ಸಮಸ್ಯೆಗಳನ್ನು ಬಗೆಹರಿಸದಷ್ಟು ನಿಶ್ಯಕ್ತವಾಗಿದೆ ಎಂದು ಪ್ರತಿಭಟನಾ ನಿರತರು ದೂರಿದರು.
  ಆಚಾಪುರ ಗ್ರಾಮದಲ್ಲಿ ಸುಮಾರು 300 ಮನೆಗಳಿದ್ದು ಈ ಭಾಗದಲ್ಲಿ ಪಂಚಾಯ್ತಿ ವ್ಯಾಪ್ತಿಗೆ ನೀರು ಪೂರೈಸುವೆ ಟ್ಯಾಂಕ್ ಸಹ ಇದೆ. ಆದರೆ ಆಚಾಪುರಕ್ಕೆ ಟ್ಯಾಂಕಿನಿಂದ ನೀರುಸಿಗುತ್ತಿಲ್ಲ.
  ಬದಲಾಗಿ ಮುರುಘಾಮಠ, ಇಸ್ಲಾಂಪುರಗಳಿಗೆ ನೀರು ಹರಿಸಲಾಗುತ್ತಿದೆ. ಬೇಸಿಗೆಯಾಗಿದ್ದರಿಂದ ಇಲ್ಲಿರುವ ಬಾವಿಗಳೂ ಬತ್ತಿ ಹೋಗಿದ್ದು, ಜನರು ನೀರಿಗಾಗಿ ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದೆ.
 ಕುಡಿಯುವ ನೀರನ್ನು ಸಮರ್ಪಕವಾಗಿ ಪೂರೈಕೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
  ಮಹಮದ್ ಇಬ್ರಾಹಿಂ, ಶೇಖಖ್ಮನ್ಸೂರ್, ಸಾಧಿಕ್, ಅಮೀರ್ಭಾಷಾ, ಪ್ರವೀಣ್, ಶಶಿ ಪಾಟೀಲ್, ವಿರೂಪಾಕ್ಷ ಇನ್ನಿತರರು ಹಾಜರಿದ್ದರು.
ನಾಲ್ಕು ದಿನಗಳಲ್ಲಿ ಸಮಸ್ಯೆಗೆ ಪರಿಹಾರ ಗ್ರಾಮಸ್ಥರಿಂದ ಮನವಿ ಸ್ವೀಕರಿಸಿದ ಆಚಾಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸಹರಾ ಬೇಗಂ ಇನ್ನು ಮೂರ್ನಾಲ್ಕು ದಿನಗಳಲ್ಲಿ ನೀರಿನ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement