ಉಚಿತ ದಂತ ತಪಾಸಣೆ
ಶಿವಮೊಗ್ಗ: ಹಾರ್ನಳ್ಳಿ ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ರೋಟರಿ ಶಿವಮೊಗ್ಗ ಪೂರ್ವ ಮತ್ತು ಇನ್ನರ್‌ವ್ಹೀಲ್ ಕ್ಲಬ್ ಪೂರ್ವ ಹಾಗೂ ಶರಾವತಿ ದಂತ ವೈದಕೀಯ ಕಾಲೇಜು ಸಂಯುಕ್ತಾಶ್ರಯದಲ್ಲಿ ಉಚಿತ ದಂತ ತಪಾಸಣೆ ಹಾಗೂ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮುನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕಾರ್ಯಕ್ರಮದ ಸದುಪಯೋಗಪಡೆದುಕೊಂಡರು. ತಪಾಸಣಾ ಶಿಬಿರದಲ್ಲಿ ಡಾ. ರಾಮಚಂದ್ರ, ಡಾ. ಶ್ರೀನಿವಾಸ್ ದಂತ ರಕ್ಷಣೆಯ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಅಧ್ಯಕ್ಷತೆ ವಹಿಸಿದ್ದ ರೋಟರಿ ಅಧ್ಯಕ್ಷ ಕೆ.ಬಿ. ರವಿಶಂಕರ್, ರೋಟರಿ ಸಂಸ್ಥೆಯ ಮುಖಾಂತರ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ಆರೋಗ್ಯ ತಪಾಸಣೆ ಬಗ್ಗೆ ಹೆಚ್ಚು ಗಮನ ನೀಡುವುದಾಗಿ ತಿಳಿಸಿದರು.
ವೇದಿಕೆಯಲ್ಲಿ ಶರಾವತಿ ದಂತ ವೈದಕೀಯ ಕಾಲೇಜಿನ ವೈದ್ಯರು, ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಅನಿತಾ ರವಿಶಂಕರ್, ಕಾರ್ಯದರ್ಶಿ ಬಿಂದು ವಿಜಯಕುಮಾರ್, ರೋಟರಿ ಪೂರ್ವ ವಿದ್ಯಾ ಸಂಸ್ಥೆಯ ಜಿ. ವಿಜಯಕುಮಾರ್, ಕಾರ್ಯದರ್ಶಿ ಕೇಶವಪ್ಪ ಮುಖ್ಯೋಪಾಧ್ಯಯರಾದ ಪುಟ್ಟರಂಗಮ್ಮ ಉಪಸ್ಥಿತರಿದ್ದರು.