ಏ.12ರಿಂದ ಮಕ್ಕಳ ರಂಗಶಿಬಿರ (ಸುದ್ದಿ ಸಂಕ್ಷೇಪ)
ಶಿವಮೊಗ್ಗ: ರಂಗಬೆಳಕು ಏಪ್ರಿಲ್ 12ರಿಂದ ಮೇ1ರ ವರೆಗೆ ನಗರದ ದುರ್ಗಿಗುಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮಕ್ಕಳ ರಂಗಶಿಬಿರ ಏರ್ಪಡಿಸಿದೆ. ಶಿಬಿರಕ್ಕೆ 12ರಿಂದ 16 ವಯೋವಾನ ಮಕ್ಕಳು ಅರ್ಹರಾಗಿದ್ದು, 40 ಮಕ್ಕಳಿಗೆ ಅವಕಾಶವಿರುತ್ತದೆ. ಪ್ರತಿ ನಿತ್ಯ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರಗೆ ನಡೆಯುವ ಕಾರ್ಯಕ್ರಮಕ್ಕೆ ರಂಗಭೂಮಿಯ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಮಕ್ಕಳಿಗಾಗಿ ಏರ್ಪಡಿಸಿದ್ದ ಎರಡು ನಾಟಕಗಳು ಮೇ 1 ರಂದು ಕುವೆಂಪು ರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ. ಆಸಕ್ತರು ಕೊಟ್ರಪ್ಪ ಜಿ. ಹಿರೇಮಾಗಡಿ ಇವರ ಬಳಿ ಹೆಸರು ನೋಂದಾಯಿಸಿವಂತೆ ತಂಡದ ಕಾರ್ಯದರ್ಶಿ ಉಮೇಶ್ ಎಂ. ಪಿಳ್ಳಂಗಿರಿ ತಿಳಿಸಿದ್ದಾರೆ. ವಿವರಗಳಿಗಾಗಿ- 9844569645.
ತರಬೇತಿ ಶಿಬಿರ
ಶಿವಮೊಗ್ಗ: ದುರ್ಗಿಗುಡಿ ಕ್ರಿಕೆಟ್ ಅಸೋಸಿಯೇಷನ್ ಏಪ್ರಿಲ್ 1ರಿಂದ 15ರವರೆಗೆ ನಗರದ ಎನ್ಇಎಸ್ ಮೈದಾನದಲ್ಲಿ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರ ಏರ್ಪಡಿಸಿದೆ. ಪ್ರತಿ ನಿತ್ಯ ಬೆಳಗ್ಗೆ 6.30ರಿಂದ ನುರಿತ ಕ್ರಿಕೆಟ್ ತರಬೇತಿದಾರರಿಂದ ತರಬೇತಿ ನೀಡಲಾಗುವುದು ಎಂದು ಕ್ಲಬ್ನ ಬಿ.ಕೆ. ನಾಗರಾಜ ತಿಳಿಸಿದ್ದಾರೆ. ವಿವರಗಳಿಗಾಗಿ- 9986419637.