ಕ್ರಿಕೆಟ್ ತರಬೇತಿ ಶಿಬಿರ
ಶಿವಮೊಗ್ಗ: ಶಿವಮೊಗ್ಗ ಕ್ರಿಕೆಟ್ ಅಕಾಡೆಮಿ ಏಪ್ರಿಲ್ 2 ರಿಂದ ಮೇ 2ರ ವರೆಗೆ ಒಂದು ತಿಂಗಳ ಕಾಲ ನಗರದ ಗೋಪಾಲಗೌಡ ಬಡಾವಣೆ ಕ್ರಿಕೆಟ್ ತರಬೇತಿ ಕೇಂದ್ರದಲ್ಲಿ ತರಬೇತಿ ಶಿಬಿರ ಹಮ್ಮಿಕೊಂಡಿದೆ. 10ರಿಂದ 17 ವರ್ಷದೊಳಗಿನ ಬಾಲಕ, ಬಾಲಕಿಯರಿಗೆ ಎನ್ಐಎಸ್ ತರಬೇತುದಾರರಿಂದ ತರಬೇತಿ ನೀಡಲಾಗುವುದು ಎಂದು ಅಕಾಡೆಮಿಯ ಕಾರ್ಯದರ್ಶಿ ಬಾಲಕೃಷ್ಣ ನಾಯ್ಡು ತಿಳಿಸಿದ್ದಾರೆ. ವಿವರಗಳಿಗಾಗಿ- 9448256122.
ಡ್ರೆಸ್ ಮೇಕಿಂಗ್ ತರಬೇತಿ
ಶಿವಮೊಗ್ಗ: ನಗರದ ಶ್ರೀ ಕಲಾ ಇಂಟರ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿಯಲ್ಲಿ ಒಂದು ತಿಂಗಳ ಕಾಲ ಮಕ್ಕಳ ಉಡುಪುಗಳು ಹಾಗೂ ಮಹಿಳೆಯರ ಡ್ರೆಸ್- ಬ್ಲೌಸ್ ಮೇಕಿಂಗ್ ತರಬೇತಿ ಶಿಬಿರ ಏರ್ಪಡಿಸಲಾಗಿದೆ. ಬೆಳಗ್ಗೆ ಮತ್ತು ಮಧ್ಯಾಹ್ನ ಎರಡು ಬ್ಯಾಚ್ಗಳಲ್ಲಿ ತರಬೇತಿ ನಡೆಯಲಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಆರ್.ಟಿ. ನಟರಾಜ್ ತಿಳಿಸಿದ್ದಾರೆ. ವಿವರಗಳಿಗಾಗಿ- 08182-295161.