ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಜಿಲ್ಲಾ ಮಟ್ಟದ ಕೇಶ ವಿನ್ಯಾಸ ಸ್ಪರ್ಧೆ

Rashmi Kasaragodu
Updated On : 28 Mar 2013, 10:41 am

ಕ.ಪ್ರ. ವಾರ್ತೆ ೤ ಶಿಕಾರಿಪುರ ೤ ಮಾ.27 ಇಲ್ಲಿನ ಸವಿತಾ ಸಮಾಜ, ಸವಿತಾ ಯುವಕ ಸಂಘ, ಇವರುಗಳ ಸಂಯುಕ್ತಾಶ್ರಯದಲ್ಲಿ ಇದೇ ಪ್ರಥಮ ಬಾರಿಗೆ ಪಟ್ಟಣದ ಸವಿತಾ ಸಮುದಾಯ ಭವನದಲ್ಲಿ ಮಂಗಳವಾರ ಅಂತರ್ ಜಿಲ್ಲಾ ಮಟ್ಟದ ಕೇಶ ವಿನ್ಯಾಸ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ರಾಜ್ಯ ಕ್ಷೌರಿಕ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಜೋಪ್ ಮುನಿರಾಜು ಮಾತನಾಡಿ, ಕ್ಷೌರಿಕ ವೃತ್ತಿಯವರು ಕೀಳರಿಮೆಯನ್ನು ತೊರೆದು ವೃತ್ತಿ ಪ್ರೇಮವನ್ನು ಮೈಗೂಡಿಸಿಕೊಂಡು ಆತ್ಮಾಭಿಮಾನದಿಂದ ವೃತ್ತಿಯಲ್ಲಿ ಮುಂದುವರಿಯುವಂತೆ ಸಲಹೆ ನೀಡಿದರು.
ಸವಿತಾ ಯುವಕ ಸಂಘದ ಅಧ್ಯಕ್ಷ ವಿ. ರಘು ಮಾತನಾಡಿ, ಇತ್ತೀಚಿನ ದಿನದಲ್ಲಿ ಸಮಾಜ ನಾಗರಿಕತೆಯತ್ತ ಮುಖ ಮಾಡಿದ್ದು, ವೃತ್ತಿಯ ಜತೆಗೆ ಶಿಕ್ಷಣ, ಸಂಸ್ಕಾರವನ್ನು ಮೈಗೂಡಿಸಿಕೊಳ್ಳಲು ತಿಳಿಸಿದರು.
ರಾಣೆಬೆನ್ನೂರಿನ ಬ್ಯೂಟೀಷಿಯನ್ ತರಬೇತುದಾರ ನಾಗರಾಜಗೌಡ, ಗೋಲ್ಡ್ ಪಿಂಗರ್ ಪ್ರಶಸ್ತಿ ವಿಜೇತ ಮಂಜುನಾಥ್, ಕ್ಷೌರಿಕ ಹಿತರಕ್ಷಣಾ ವೇದಿಕೆಯ ಕಾರ್ಯದರ್ಶಿ ಧನರಾಜ್, ಸವಿತ ಸಹಕಾರ ಸಂಘದ ಅಧ್ಯಕ್ಷ ಈಶ್ವರಪ್ಪ, ವೆಂಕಟೇಶ್, ಗೋವಿಂದರಾಜ್, ಸತ್ಯನಾರಾಯಣ, ಮಾಲತೇಶ್, ಬಾಲರಾಜ್,  ಕಾರ್ಯದರ್ಶಿ ರಾಮು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement