ಪಡಿತರ ಚೀಟಿಗೆ ಎಸ್.ಎಂ.ಎಸ್
ಭದ್ರಾವತಿ: ಡಿಸೆಂಬರ್ 2010ರ ಪೂರ್ವದಲ್ಲಿ ನೀಡಿದ್ದ ಪಡಿತರ ಚೀಟಿಗಳನ್ನು ಹೊಂದಿದ್ದವರು ಹೊಸದಾಗಿ ಬೆರಳಚ್ಚು ಬಯೋವುಟ್ರಿಕ್ ನೀಡಿದ ನಂತರ ಅಂತಹ ರೇಶನ್ ಕಾರ್ಡುದಾರರಿಗೆ ಪಡಿತರ ವಿತರಿಸಲು ಸಂಬಂಧಪಟ್ಟ ಪಡಿತರ ಚೀಟಿದಾರರು 9212357123ಗೆ ಖಈಖಊಃಣ ರೇಶನ್ ಕಾರ್ಡ್ ಸಂಖ್ಯೆ ನಮೂದಿಸಿ ಎಸ್.ಎಂ.ಎಸ್ ಕಳುಹಿಸಿಸಲು ಕೋರಿದೆ.
ನಂತರ ಟೋಕನ್ ನಂಬರ್ ಮತ್ತು ಸೆಕ್ಯೂರಿಟಿ ಕೋಡ್ಗಳನ್ನು ನ್ಯಾಯಬೆಲೆ ಅಂಗಡಿಗಳಲ್ಲಿ ತೋರಿಸಿ ಪಡಿತರ ಆಹಾರಧಾನ್ಯ ಪಡೆಯುವುದು ಹಾಗೂ ಪ್ರತಿ ಸೇವಾಕೇಂದ್ರದಲ್ಲಿ ಪಡೆಯುವ ಸೇವೆಗೆ ಸೇವಾಶುಲ್ಕವಾಗಿ 50 ಮಾತ್ರ ನೀಡುವುದು. 50 ಗಿಂತ ಹೆಚ್ಚು ಪಡೆಯುವ ಸೇವಾಕೇಂದ್ರದ ವಿರುದ್ಧ ದೂರು ಸಲ್ಲಿಸಿದಲ್ಲಿ ಸದರಿ ಸೇವಾಕೇಂದ್ರ ರದ್ದುಪಡಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಹಾಯಕ ನಿರ್ದೇಶಕ ಸಿ. ಜಯಪ್ಪ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.