ಮಹಿಳೆ ವಿಷ ಸೇವಿಸಿ ಆತ್ಮಹತ್ಯೆ, ಕೊಲೆ ಶಂಕೆ
ಜೋಗ್‌ಫಾಲ್ಸ್: ಕಳೆದ ಡಿಸೆಂಬರ್‌ನಲ್ಲಿ ನಡೆದಿದ್ದ ಯುವತಿ ಸುಮತಿ ಕೊಲೆಯ ನಂತರ ಇದೀಗ ಇಲ್ಲಿನ ಕಣೆಕಾರ್‌ನಲ್ಲಿ ಮತ್ತೊಂದು ಆತ್ಮಹತ್ಯೆ ಪ್ರಕರಣ ಬುಧವಾರ ದಾಖಲಾಗಿದೆ. ಪಟ್ಟಣ ಪಂಚಾಯ್ತಿಯ ಸದಸ್ಯ ರವಿ ಜೋಗ್ ಪ್ರೀತಿಸಿ ಮದುವೆಯಾಗಿದ್ದ ಯುವತಿ ಕವಿತಾ ಮನೆಯಲ್ಲೇ ವಿಷ ಸೇವಿಸಿ ಸಾವಿಗೀಡಾಗುವುದು ಅನುಮಾನಗಳಿಗೆ ಕಾರಣಳಾಗಿದೆ.
ಕಳೆದ ನಾಲ್ಕೈದು ದಿನಗಳಿಂದ ನಾಪತ್ತೆಯಾಗಿದ್ದ ಕವಿತಾ ತನ್ನ ಮನೆಯಲ್ಲೇ ಅನ್ನದಲ್ಲಿ ವಿಷ ಬೆರೆಸಿ ತಿನ್ನುವ ಮೂಲಕ ಸಾವಿಗೆ ಶರಣಾಗಿದ್ದಾಳೆ. ಕಳೆದ ಕೆಲವು ದಿನಗಳಿಂದ ಕವಿತಾಳ ಪೋಷಕರು ಬೇರೆಡೆ ನಿದ್ರಿಸಲು ತೆರಳುತ್ತಿದ್ದರು. ಇದನ್ನರಿತ ಕವಿತಾ ನೆನ್ನೆ ರಾತ್ರಿ ಸಮಯದಲ್ಲಿ ಮನೆಯ ಹೆಂಚುಗಳನ್ನು ತೆಗೆದು ಒಳಬಂದು ಕೀಟನಾಶಕ ಸೇವಿಸಿ ಅತ್ಮಹತ್ಯೆ ಮಾಡಿಕೊಂಡಿಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಆದರೆ ಕವಿತಾಳ ಪೋಷಕರು ಮಾತ್ರ ಕವಿತಾ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದೌರ್ಬಲ್ಯವನ್ನು ಹೊಂದಿರಲಿಲ್ಲ. ಇದನ್ನು ರವಿಯೇ ಮಾಡಿರಬೇಕೆಂದು ಆರೋಪಿಸಿದ್ದಾರೆ.
ವಿದ್ಯಾರ್ಥಿ ಸಾವು
ಶಿವಮೊಗ್ಗ: ತುಂಗಾ ನದಿಯಲ್ಲಿ ಈಜಲು ತೆರಳಿದ್ದ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಸಾವನಪ್ಪಿರುವ ಘಟನೆ ಬುಧವಾರ ನಗರದಲ್ಲಿ ನಡೆದಿದೆ. ಇಲ್ಲಿನ ಎಟಿಎನ್‌ಸಿಸಿ ಕಾಲೇಜಿನಲ್ಲಿ ಬಿಬಿಎಂ ವ್ಯಾಸಂಗ ಮಾಡುತ್ತಿದ್ದ ಪವನ್ (20) ಮೃತ ವಿದ್ಯಾರ್ಥಿ. ಬುಧವಾರ ಬೆಳಿಗ್ಗೆ 11ಗಂಟೆ ಸಮಯದಲ್ಲಿ ಬಿಸಿಎಂ ಹಾಸ್ಟೆಲ್‌ನ 12 ಜನ ಇತರೆ ವಿದ್ಯಾರ್ಥಿಗಳೊಂದಿಗೆ ಹೋಳಿ ಆಟಾಡಿ ಹರಕೆರೆಯ ತುಂಗಾನದಿ ಬಳಿ ಈಜಲು ತೆರಳಿದ್ದಾಗ ಈ ಘಟನೆ ನಡೆದಿದೆ. ಪ್ರಕರಣ ತುಂಗಾ ನಗರ ಠಾಣೆಯಲ್ಲಿ ದಾಖಲಾಗಿದೆ.