ಯುವತಿ ಕಾಣೆ
ಶಿವಮೊಗ್ಗ: ಹೆಗ್ಗೋಡು ಬೋಗಾರುಕೊಪ್ಪದ ವೆಂಕಪ್ಪಗೌಡರ ಮಗಳು ಸುಪ್ರೀತಾ (21) ಕಾಣೆಯಾಗಿದ್ದಾರೆ. ಮನೆಯಿಂದ ತೀರ್ಥಹಳ್ಳಿಯಲ್ಲಿನ ಬೆನಕ ಸ್ಟುಡಿಯೋಗೆ ಕೆಲಸಕ್ಕೆ ಹೋಗುತ್ತಿದ್ದು, ಮಾ.15ರಂದು ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋದವರು ಮನೆಗೆ ಬಂದಿಲ್ಲ. ಗೋಧಿ ಮೈಬಣ್ಣ, ದುಂಡುಮುಖ, 163 ಸೆ.ವೀ ಎತ್ತರ, ಸಾಧಾರಣ ಮೈಕಟ್ಟು ಹೊಂದಿದ್ದಾರೆ. ಈ ಚಹರೆಯ ಯುವತಿ ಪತ್ತೆಯಾದಲ್ಲಿ ಆಗುಂಬೆ ಠಾಣೆ (08181-233181), ತೀರ್ಥಹಳ್ಳಿ (08181-228310)ಸಂಪರ್ಕಿಸುವಂತೆ ಆಗುಂಬೆ ಠಾಣೆಯ ಪಿಎಸ್ಐ ತಿಳಿಸಿದ್ದಾರೆ.
ಯೋಗ ಚಿಕಿತ್ಸೆ ತರಬೇತಿ
ಶಿವಮೊಗ್ಗ: ವೆಂಕಟೇಶ ನಗರದ ವಿವೇಕಾನಂದ ಯೋಗ ವಸುದೈವ ಕುಟುಂಬ ಕಮ್ ಟ್ರಸ್ಟ್ನಲ್ಲಿ ಏಪ್ರಿಲ್ 1ರಿಂದ ಡಸ್ಟ್ ಅಲರ್ಜಿ, ಮಾನಸಿಕ ಅಸಮತೋಲನ ಮತ್ತಿತರ ಕಾಯಿಲೆಗಳಿಗೆ ಯೋಗ ಚಿಕಿತ್ಸೆ ತರಬೇತಿ ನೀಡಲಾಗುವುದು. ಎಂದು ಟ್ರಸ್ಟ್ನ ಅಧ್ಯಕ್ಷ ಯೋಗಾಚಾರ್ಯ ಸುರೇಶ್ಕುಮಾರ್ ತಿಳಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.