ವಿಪ್ರ ಕುಟುಂಬ ಸಮ್ಮಿಲನ
ಶಿವಮೊಗ್ಗ: ಕಾರ್ಗಲ್ನಲ್ಲಿರುವ ಶ್ರೀ ರಾಮಮಂದಿರ ಆವರಣದಲ್ಲಿ ವಿಪ್ರಕೂಟ ಮಾ. 31ರಂದು ಬೆಳಗ್ಗೆ 8.30ರಿಂದ ರಾತ್ರಿ 8.30ರ ವರೆಗೆ ವಿಪ್ರ ಕುಟುಂಬ ಸಮ್ಮಿಲನ ಏರ್ಪಡಿಸಿದೆ. ಬೆಳಗ್ಗೆ 10 ಗಂಟೆಗೆ ಚಂದನ ವಾಹಿನಿಯ ಗಮಕ ವಿದ್ವಾಂಸ ಡಾ.ಎ.ವಿ. ಪ್ರಸನ್ನ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯಅತಿಥಿಯಾಗಿ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಕಾರ್ಯದರ್ಶಿ ಮ.ಸ. ನಂಜುಡಸ್ವಾಮಿ, ಸಭಾದ ಉಪಾಧ್ಯಕ್ಷ ಎಲ್.ಟಿ. ತಿಮ್ಮಪ್ಪಹೆಗಡೆ, ಅಬಸೆ ದಿನೇಶ್ಕುಮಾರ್ ಎನ್. ಜೋಷಿ, ಜಿಲ್ಲಾ ಅಧ್ಯಕ್ಷ ಡಾ. ಬಿ. ವೆಂಕಟರಾವ್ ಮತ್ತಿತರರು ಪಾಲ್ಗೊಳ್ಳುವರು. ಬೆಳಗ್ಗೆ 11.30ಕ್ಕೆ ವಿಪ್ರರ ಪ್ರಾಚೀನ ಪರಂಪರೆ ಮತ್ತು ಕುಟುಂಬ ವ್ಯವಸ್ಥೆ ಕುರಿತಂತೆ ನಗರದ ಕಸ್ತೂರಬಾ ಕಾಲೇಜಿನ ಪ್ರಾಧ್ಯಾಪಕ ಜಿ.ಎಸ್. ನಟೇಶ್ರಿಂದ ಉಪನ್ಯಾಸ, ಸಂಜೆ 4ಕ್ಕೆ ವಿಪ್ರ ಸಮುದಾಯದ ಬಾದ್ಯತೆಗಳು ವಿಷಯದ ಬಗ್ಗೆ ವಿಚಾರ ಮಂಥನವನ್ನು ಕುಮಟದ ಎ.ವಿ. ಬಾಳಿಗ ಕಾಲೇಜಿನ ಉಪನ್ಯಾಸಕ ಡಾ. ಶಂಕರ್ ಎಸ್. ಭಟ್ ಧಾರೇಶ್ವರ ನಡೆಸಿಕೊಡುವರು. ಸಂಜೆ 5.30ಕ್ಕೆ ಸಮಾರೋಪ ನಡೆಯುವುದು.