ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸಂಭ್ರಮದ ಹೋಳಿ ಹಬ್ಬ ಆಚರಣೆ

Rashmi Kasaragodu
Updated On : 28 Mar 2013, 10:42 am

ಸಾಗರ: ಹೋಳಿ ಹಬ್ಬದ ಪ್ರಯುಕ್ತ ನಗರದ ಎಲ್ಲೆಡೆ ಬುಧವಾರ ಬೆಳಿಗ್ಗೆ ಓಕುಳಿ ಯಶಸ್ವಿಯಾಗಿ, ಶಾಂತಿಯುತವಾಗಿ ನಡೆಯಿತು. ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಕಾಮದಹನ ಹಾಗೂ ಬಣ್ಣ ಹಾಕುವುದರ ಮೇಲೆ ತೀವ್ರ ನಿಗಾವಹಿಸಿತ್ತು. ಬೆಳಿಗ್ಗೆ 7 ರಿಂದ 11 ಗಂಟೆವರೆಗೆ ಮಾತ್ರ ಓಕಳಿಯಾಡುವಂತೆ ಎಚ್ಚರಿಕೆ ನೀಡಲಾಗಿತ್ತು. ನಗರದ ಅಗ್ರಹಾರ, ಸಂಗಮೇಶ್ವರ ರಸ್ತೆ, ಶಿವಪ್ಪನಾಯಕ ನಗರ, ಚಾಮರಾಜಪೇಟೆ, ಸುಭಾಷನಗರ, ಜೋಸೆಫ್ ನಗರ, ವಿನೋಬಾ ನಗರ, ಜೋಗ ರಸ್ತೆ ಇನ್ನಿತರ ಭಾಗಗಳಲ್ಲಿ ಹಿರಿಯರು, ಕಿರಿಯರು ಹಾಗೂ ಮಹಿಳೆಯರು ಬಣ್ಣ ಎರಚಾಟದಲ್ಲಿ ಪಾಲ್ಗೊಂಡಿದ್ದ ದೃಶ್ಯ ಕಂಡು ಬಂದಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement