ಸನ್ಯಾಸಿಗಳಿಗೆ ಬಾಹ್ಯಾಡಂಬರ ಬೇಡ: ರಾಘವೇಶ್ವರ ಸ್ವಾಮೀಜಿ
ಹೊಸನಗರ: ಸಕಲವನ್ನು ತ್ಯಾಗ ಮಾಡಿ, ಧರ್ಮಚಿಂತನೆಯಲ್ಲಿ ಸಾಗುವ ಸನ್ಯಾಸಿಗಳಿಗೆ ಬಾಹ್ಯಾಡಂಬರ ಬೇಡ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ ಹೇಳಿದರು.
ಶ್ರೀರಾಮಚಂದ್ರಾಪುರ ಮಠದ ಆವರಣದಲ್ಲಿ ನಡೆದ ಬ್ರಹ್ಮಲೀನ ಶ್ರೀರಾಮಚಂದ್ರ ಭಾರತೀ ಸ್ವಾಮೀಗಳ ಆರಾಧನ ಮಹೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ನಿಸ್ವಾರ್ಥ ಮನೋಭಾವದಿಂದ ಸೇವೆ ಸಲ್ಲಿಸುವ ಶಿಷ್ಯರಿಗೆ ಗುರುಪೀಠದ ಅನುಗ್ರಹ ಎಂದಿಗೂ ಇರುತ್ತದೆ ಎಂದರು. ಸಮಾಜ ಗುರುಗಳಿಂದ ಬಡಿದೆಬ್ಬಿಸುವ ಸ್ಥಿತಿಯಲ್ಲಿರದೆ ಗುರು ಮತ್ತು ಪೀಠಕ್ಕಾಗಿ ಮಿಡಿಯುವ ಸಂವೇದನೆ ಹೊಂದಿರಬೇಕು. ಗುರು ಮತ್ತು ಗುರುಪೀಠದ ಮಹತ್ವ ಅರಿತ ಶಿಷ್ಯರು ಜಾಡ್ಯ ಬಿಟ್ಟು ಹೊರಬರಬೇಕಿದೆ ಎಂದರು.
ಉಂಚಳ್ಳಿ ಶಾಸ್ತ್ರೀಗಳು ಪ್ರಾಸ್ತಾವಿಕವಾಗಿ ಮಾತನಾಡಿದರು. ಹೆದ್ಲಿ ರಾಮಮೂರ್ತಿ ಸ್ವಾಗತಿಸಿದರು. ಹಾರೇಬೈಲು ವೆಂಕಟೇಶ ನಿರೂಪಿಸಿದರು. ಸಂಪೆಕಟ್ಟೆ ಕುಮಾರ್ ವಂದಿಸಿದರು.