ಜಿಲ್ಲೆಯಲ್ಲಿ ಮಹಿಳೆಯರ ನಾಪತ್ತೆ, ಆತ್ಮಹತ್ಯೆ ಹೆಚ್ಚಳ
ಮೋಹನ್‌ಕುಮಾರ್ ಎನ್.
ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ ಮಾ.28
ಜಿಲ್ಲೆಯಲ್ಲಿ ಆತ್ಯಾಚಾರ, ಯುವತಿ, ಮಹಿಳೆಯರ ನಾಪತ್ತೆ ಹಾಗೂ ಆತ್ಯಹತ್ಯೆ ಪ್ರಕರಣಗಳಲ್ಲಿ, ಕಳೆದ ಮೂರು ವರ್ಷಗಳ ಅಂಕಿ ಅಂಶಗಳ ಪ್ರಕಾರ ನಾಪತ್ತೆ ಹಾಗೂ ಆತ್ಯಹತ್ಯೆ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ.
2010ರಲ್ಲಿ 17, 2011ರಲ್ಲಿ 24 ಇದ್ದ ಆತ್ಯಾಚಾರ ಪ್ರಕರಣಗಳು 2012ರಲ್ಲಿ 14ಕ್ಕೆ ಇಳಿಕೆಯಾಗಿದೆ. ಇನ್ನೂ ವ್ಯಕ್ತಿ ನಾಪತ್ತೆ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, 2010ರಲ್ಲಿ 243, 2011ರಲ್ಲಿ 292 ಇದ್ದರೆ 2012ರಲ್ಲಿ 312 ಪ್ರಕರಣಗಳು, ಅದೇ ರೀತಿ ಆತ್ಯಹತ್ಯೆ ಪ್ರಕರಣಗಳು ಕೂಡ ಹೆಚ್ಚಾಗಿದ್ದು, 2010ರಲ್ಲಿ 155, 2011ರಲ್ಲಿ 164 ಇದ್ದಂತಹ ಸಂಖ್ಯೆ 182ಕ್ಕೆ ಏರಿಕೆಯಾಗಿದೆ.
ಮುಚ್ಚಿಹೋದ ಎಷ್ಟೋ ಪ್ರಕರಣಗಳು: ನಾಪತ್ತೆ ಹಾಗೂ ಆತ್ಮಹತ್ಯೆ ಪ್ರಕರಣಗಳಲ್ಲಿ 17-21ರ ವಯೋವಾನದ ಯುವತಿಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಇದು ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆಯಷ್ಟೇ. ಮನೆತನದ ಗೌರವ, ಮರ್ಯಾದೆ, ಸಮಾಜದ ಕೀಳುಭಾವನೆಗೆ ಹೆದರಿ ತಮ್ಮ ಮೇಲೆ ದೌರ್ಜನ್ಯಗಳು ನಡೆದರೂ ಠಾಣೆ ಮೆಟ್ಟಿಲೂ ಏರದ ಎಷ್ಟೋ ಪ್ರಕರಣಗಳು ಬೆಳಕಿಗೆ ಬಾರದೇ ಮುಚ್ಚಿಹೋಗುತ್ತಿವೆ.
ಆತ್ಯಾಚಾರ, ವ್ಯಕ್ತಿ ನಾಪತ್ತೆ ಹಾಗೂ ಆತ್ಯಹತ್ಯೆಯಂತಹ ಕೃತ್ಯಗಳಿಗೆ ಕಾರಣಗಳವಾಗುವ ಮನೋಚಂಚಲತೆಯನ್ನು ನಾವು ಎಂದು ಗಮನಿಸುವುದೆ ಇಲ್ಲ. ಒಬ್ಬ ವ್ಯಕ್ತಿಯಲ್ಲಿರುವ ಮನೋ ನ್ಯೂನ್ಯತೆಗಳೇ ಇವಕ್ಕೆ ದಾರಿ ಎಂಬುದು ಮನೋವೈದ್ಯರ ವಾದ.
ನಾಪತ್ತೆಗೆ ಕಾರಣ
1. ಭಾವನಾತ್ಮಕ ಸಂಬಂಧ (ಪ್ರೀತಿ, ಪ್ರೇಮ, ಇತರೆ)
2. ಬಡತನದ ಬೇಗೆ
3. ಮಾನಸಿಕ ಖಿನ್ನತೆ
4. ಕೌಟುಂಬಿಕ ಕಲಹಗಳು
5. ತಮ್ಮ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು
6. ಸಮಾಜ ಘಾತುಕ ಕೃತ್ಯಗಳಿಗೆ ಕೆಲ ಕಿಡಿಗೇಡಿಗಳಿಂದ ಪ್ರೇರಣೆ
7. ಐಷರಾಮಿ ಜೀವನದ ಲಾಲಸೆಗಳಿಂದ ಮಹಿಳೆ, ಯುವತಿಯರು ನಾಪತ್ತೆಯಾಗಬಹುದು.
ಆತ್ಯಾಚಾರಕ್ಕೆ ಕಾರಣ
1. ನೈತಿಕ ಅಧಃಪಥನ
2. ದೃಶ್ಯ ಮಾಧ್ಯಮಗಳ ಕೆಲ ಕಾರ್ಯಕ್ರಮಗಳು
3. ಸ್ವೆಚ್ಛೇಚಾರ
4. ಕಾನೂನಿನಲ್ಲಿ ಕಟ್ಟುನಿಟ್ಟಿನ ಶಿಕ್ಷೆಗಳಿಲ್ಲದಿರುವುದು
5. ಪ್ರಚೋದನಕಾರಿ ಉಡುಗೆ
6. ಹೆಣ್ಣಿನ ದೌರ್ಬಲ್ಯಗಳು
7. ಹೆಚ್ಚುತ್ತಿರುವ ವಿಭಕ್ತ ಕುಟುಂಬಗಳು
8. ಪೋಷಕರು ಹಾಗೂ ಯುವಪೀಳಿಗೆಯ ನಿರ್ಲಕ್ಷ್ಯತನ
ಆತ್ಯಹತ್ಯೆಗೆ ಕಾರಣ
ಆತ್ಮಹತ್ಯೆಗಳಂತಹ ಪ್ರಕರಣಗಳು ಹದಿಹರೆಯದ ಯುವಕ, ಯವತಿಯರಲ್ಲಿ ಹೆಚ್ಚಾಗುತ್ತಿದ್ದು, ಯವಕರಿಗಿಂತ ಯುವತಿರಲ್ಲಿ ಇಂತಹ ಮನಸ್ಥಿತಿ ಹೆಚ್ಚಿರುವುದು ವಿಪರ್ಯಾಸ. ವೈವಾಹಿಕ ಸಮಸ್ಯೆ, ಅನೈತಿಕ ಸಂಬಂಧ, ದೈಹಿಕ ಅನಾರೋಗ್ಯ, ಉದ್ಯೋಗದಲ್ಲಿ ಅತೃಪ್ತಿ, ಮಾನಸಿಕ ನೆಮ್ಮದಿ ಸಿಗದಿರುವುದು, ವರದಕ್ಷಿಣೆ ಕಿರುಕುಳ ಸೇರಿದಂತೆ ಹಲವು ಅಂಶಗಳು ಕಾರಣವಾಗುತ್ತವೆ.
ಮಹಿಳೆ ಹಾಗೂ ಯುವತಿಯರಿಗೆ ನೈತಿಕ ಶಿಕ್ಷಣ ನೀಡುವುದು, ಸಾಮಾಜಿಕ ನೆಲೆಗಟ್ಟಿನಲ್ಲಿ ಕಠಿಣ ಕಾನೂನುಗಳು ತರುವುದು, ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು.
ಆತ್ಮಸ್ಥೈರ್ಯ ತುಂಬುವುದು, ಒತ್ತಡಗಳ ನಿವಾರಣೆಗೆ ಕ್ರಮಕೈಗೊಳ್ಳುವುದು, ಚಿಕಿತ್ಸೆ, ಅಪ್ತಸಮಾಲೋಚನೆಗಳಿಂದ ಇಂತಹ ಪ್ರಕರಣಗಳನ್ನು ತಡೆಯಬಹುದು ಎನ್ನುತ್ತಾರೆ ಮನೋವೈದ್ಯ ರು.