ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮಾಜಿ ಸೈನಿಕರ ಗಮನಕ್ಕೆ (ಸುದ್ದಿ ಸಂಕ್ಷೇಪ)

Rashmi Kasaragodu
Updated On : 29 Mar 2013, 10:53 am

ಶಿವಮೊಗ್ಗ: ಮೇ 5ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2013ರಲ್ಲಿ ಸ್ವಂತ ಇಚ್ಛೆಯ ಮೇರೆಗೆ ಕೆಲಸ ಮಾಡಲಿಚ್ಛಿಸುವ ಮಾಜಿ ಸೈನಿಕರು ತಮ್ಮ ಹೆಸರುಗಳನ್ನು ಏಪ್ರಿಲ್ 3ರೊಳಗೆ ಹೆಸರು ನೋಂದಾಯಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಕೋರಿದೆ.
ಪ್ರಾಣಾಯಾಮ
ಶಿವಮೊಗ್ಗ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಕ್ರೀಡಾ ಪ್ರಾಧಿಕಾರ ಹಾಗೂ ಕಣಾದ ಯೋಗ ಮತ್ತು ಸಂಶೋಧನಾ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಏಪ್ರಿಲ್ 1ರಿಂದ 11ರವರೆಗೆ ನೆಹರು ಕ್ರೀಡಾಂಗಣದ ಯೋಗ ಮಂದಿರದಲ್ಲಿ ತಲೆನೋವಿನಿಂದ ಉಂಟಾಗುವ ಸಮಸ್ಯೆಗಳ ನಿಯಂತ್ರಣಕ್ಕೆ ಯೋಗ ಮತ್ತು ಪ್ರಾಣಾಯಾಮ ಮನೆಮದ್ದು ತರಬೇತಿ ಶಿಬಿರವನ್ನು ಏರ್ಪಡಿಸಲಾಗಿದೆ.
ಪ್ರತಿದಿನ ಬೆಳಿಗ್ಗೆ 6ರಿಂದ 7ಗಂಟೆಯವರೆಗೆ ಪುರುಷರಿಗೆ ಹಾಗೂ ಸಂಜೆ 4.30ರಿಂದ 5.30ರವರೆಗೆ ಮಹಿಳೆಯರಿಗೆ ಶಿಬಿರ ನಡೆಯಲಿದೆ. ಆಸಕ್ತರು ನೋಂದಣಿಗಾಗಿ ಯೋಗಪಟು ಅನಿಲ್‌ಕುಮಾರ್ ಮೊ-9886674375ನ್ನು ಸಂಪರ್ಕಿಸುವಂತೆ ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಬ್ಯಾನರ್: ಸೂಚನೆ
ಶಿವಮೊಗ್ಗ: ನಗರಸಭಾ ವ್ಯಾಪ್ತಿಯಲ್ಲಿನ ಸಾರ್ವಜನಿಕ ಆಸ್ತಿಗಳಾದ ವಿದ್ಯುತ್ ಕಂಬ, ಸಿಗ್ನಲ್ ಲೈಟ್, ಗಿಡ-ಮರಗಳಿಗೆ ಪ್ಲೆಕ್ಸ್‌ತಯಾರಕರು ಹಾಗೂ ಅಳವಡಿಕೆದಾರರು ಅನಧಿಕೃತವಾಗಿ ಪ್ರಚಾರ ಫಲಕ ಅಳವಡಿಸುವುದನ್ನು ಹಾಗೂ ಸಾರ್ವಜನಿಕ ಸ್ವತ್ತುಗಳಾದ ಫುಟ್‌ಪಾತ್, ಚರಂಡಿ, ಕಾಂಪೌಂಡ್, ತಂತಿಬೇಲಿ ಇತ್ಯಾದಿಗಳಿಗೆ ವಿರೂಪ ಉಂಟುಮಾಡುವುದನ್ನು ಶಿವಮೊಗ್ಗ ನಗರಸಭೆ ನಿಷೇಧಿಸಿದೆ.  ನಗರಸಭೆಯ ನಿಯಮ ಉಲ್ಲಂಘಿಸಿ ಸಾರ್ವಜನಿಕ ಸ್ವತ್ತನ್ನು ನಾಶಗೊಳಿಸುವುದು, ಹಾನಿಯುಂಟು ಮಾಡುವುದು ಹಾಗೂ ವಿರೂಪಗೊಳಿಸುವವರ ವಿರುದ್ಧ ಕರ್ನಾಟಕ ಬಯಲು ಸ್ಥಳಗಳ ಅಧಿನಿಯಮದ ಪ್ರಕಾರ ದಂಡನೆಗೆ ಗುರಿಪಡಿಸಲಾಗುವುದೆಂದು ಪೌರಾಯುಕ್ತರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement