ಇಂದು ಭಾರತೀಯ ಪುರಾತತ್ವ ಕುರಿತು ವಿಶೇಷ ಉಪನ್ಯಾಸ
ಶಿವಮೊಗ್ಗ: ನಗರದ ಡಿವಿಎಸ್ ಶಾಲಾ ಮತ್ತು ವಿಜ್ಞಾನ ಕಾಲೇಜಿನ ಸಿಂಗಾರ ಸಭಾಂಗಣದಲ್ಲಿ ಮಾ.30 ಬೆಳಿಗ್ಗೆ 11-30ಕ್ಕೆ ಭಾರತೀಯ ಪುರಾತತ್ವ ವಿಷಯದ ಕುರಿತು ವಿಶೇಷ ಉಪನ್ಯಾಸ ಏರ್ಪಡಿಸಲಾಗಿದೆ.
ಕಾಲೇಜಿನ ಇತಿಹಾಸ ವೇದಿಕೆ ಹಾಗೂ ಭಾರತೀಯ ಇತಿಹಾಸ ಸಂಕಲನ ಸಮಿತಿಯ ಶಿವಮೊಗ್ಗ ಘಟಕದ ಸಂಯುಕ್ತಾಶ್ರಯದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ನವದೆಹಲಿಯ ಭಾರತೀಯ ಇತಿಹಾಸ ಸಂಕಲನ ಸಂಯೋಜನಾದ ಅಖಿಲ ಭಾರತ ಸಂಘಟನಾ ಕಾರ್ಯದರ್ಶಿ ಬಾಲಮುಕುಂದ ಪಾಂಡೆ ಉಪನ್ಯಾಸ ನೀಡುವರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಮಂಜುನಾಥ ಅಧ್ಯಕ್ಷತೆ ವಹಿಸುವರು.ಗೋಪಾಲ, ಪ್ರೊ. ವೆಂಕಟೇಶ್, ಡಾ. ಬಾಲಕೃಷ್ಣ ಹೆಗಡೆ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.